ಬೆಂಗಳೂರು: ಇದುವರೆಗೆ ಅಂತರಜಾಲ ಮಾರಾಟ ತಾಣಗಳಲ್ಲಿ (ಇ–ಕಾಮರ್ಸ್) ಮಾತ್ರ ಲಭ್ಯ ಇದ್ದ ಪ್ಯಾನಾಸೋನಿಕ್ ಇಂಡಿಯಾದ ಸ್ಮಾರ್ಟ್ಫೋನ್ಗಳು ಇನ್ನು ಮುಂದೆ ರಿಟೇಲ್ ಮಳಿಗೆಗಳಲ್ಲಿಯೂ ಲಭ್ಯ ಇರಲಿವೆ.
ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದ ‘ಪಿ-100’ (2 ಜಿಬಿ), ‘ಎಲ್ಯೂಗಾ 9’, ‘ರೇ 500‘ ಮತ್ತು ‘ರೇ 700’ ಸ್ಮಾರ್ಟ್ಫೋನ್ಗಳು ಮಳಿಗೆಗಳಲ್ಲಿ ದೊರೆಯಲಿವೆ.
ಈ ಮೊಬೈಲ್ಗಳಿಗೆ ಆನ್ಲೈನ್ ಮಾರುಕಟ್ಟೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ರಿಟೇಲ್ ಮಳಿಗೆಗಳಲ್ಲಿಯೂ ಇದೇ ಯಶಸ್ಸು ನಿರೀಕ್ಷಿಸಲಾಗಿದೆ ಎಂದು ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.