ADVERTISEMENT

ಮುಷ್ಕರ: ಮಾರುತಿ ಡೀಸೆಲ್ ಚಾಲಿತ ಕಾರು ವಿತರಣೆ ವಿಳಂಬ

​ಪ್ರಜಾವಾಣಿ ವಾರ್ತೆ
Published 15 ಜೂನ್ 2011, 19:30 IST
Last Updated 15 ಜೂನ್ 2011, 19:30 IST

ನವದೆಹಲಿ (ಪಿಟಿಐ): ಮಾರುತಿ ಸುಜುಕಿ ಇಂಡಿಯಾದ ಮಾನೆಸರ್ ಘಟಕದಲ್ಲಿನ ಕಾರ್ಮಿಕರ ಮುಷ್ಕರವು 12ನೇ ದಿನಕ್ಕೆ ಕಾಲಿಟ್ಟಿದ್ದು, ಆಯ್ದ ಡೀಸೆಲ್ ಕಾರುಗಳ ವಿತರಣೆಯು ಹೆಚ್ಚುವರಿಯಾಗಿ ಇನ್ನೂ ಒಂದು ತಿಂಗಳು ವಿಳಂಬಗೊಳ್ಳಲಿದೆ.

ಸ್ವಿಫ್ಟ್, ಡಿಝೈರ್ ಮತ್ತು ಎಸ್‌ಎಕ್ಸ್4 ಕಾರು ವಿತರಿಸುವುದು ತಡವಾಗಲಿದೆ. ಮುಷ್ಕರದ ಮುಂಚೆಯೂ ಈ ಮಾದರಿ ಕಾರುಗಳ ವಿತರಣೆಯು 1ರಿಂದ ನಾಲ್ಕು ತಿಂಗಳು ವಿಳಂಬವಾಗುತ್ತಿತ್ತು. ಮುಷ್ಕರದ ಕಾರಣಕ್ಕೆ ಉತ್ಪಾದನೆ ಸ್ಥಗಿತಗೊಂಡಿರುವುದರಿಂದ ತಿಂಗಳ ಮಾರಾಟವು ಕುಸಿತಗೊಳ್ಳಲಿದೆ ಎಂದು `ಎಂಎಸ್‌ಐ~ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.