ADVERTISEMENT

ಮೈಕ್ರೊಸಾಫ್ಟ್‌ಗೆ ನಷ್ಟ!

​ಪ್ರಜಾವಾಣಿ ವಾರ್ತೆ
Published 21 ಜುಲೈ 2012, 19:30 IST
Last Updated 21 ಜುಲೈ 2012, 19:30 IST

ನ್ಯೂಯಾರ್ಕ್ (ಪಿಟಿಐ): ಜಾಗತಿಕ ಮಟ್ಟದಲ್ಲಿ ಮುಂಚೂಣಿ ಕಂಪೆನಿಯಾಗಿರುವ `ಮೈಕ್ರೊಸಾಫ್ಟ್~ 26 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಭಾರಿ ನಷ್ಟ ಅನುಭವಿಸಿದೆ.ಪ್ರಸಕ್ತ ವರ್ಷದ ಜೂನ್‌ಗೆ ಕೊನೆಗೊಂಡ ತ್ರೈಮಾಸಿಕದಲ್ಲಿ ಕಂಪೆನಿ 49.20 ಕೋಟಿ ಡಾಲರ್‌ನಷ್ಟು ನಿವ್ವಳ ನಷ್ಟ ಅನುಭವಿಸಿದೆ.

ಆನ್‌ಲೈನ್ ಜಾಹಿರಾತಿನಿಂದ ಬರುವ ವರಮಾನ ತೀವ್ರವಾಗಿ ಕುಸಿದಿರುವ ಹಿನ್ನೆಲೆಯಲ್ಲಿ ಕಂಪೆನಿಯ ಒಟ್ಟಾರೆ ಲಾಭದಲ್ಲಿಯೂ ಕುಸಿತವಾಗಿದೆ. ಇಂಟರ್‌ನೆಟ್ ಸೇವಾ ವಿಭಾಗವಾ `ಎ ಕ್ವಾಂಟೀವ್~ ಸಹ ನಷ್ಟದಲ್ಲಿದೆ ಎಂದು ಕಂಪೆನಿ ಹೇಳಿದೆ.2012ರ ಜೂನ್ ತ್ರೈಮಾಸಿಕದಲ್ಲಿ ನಿವ್ವಳ ಲಾಭದಲ್ಲಿ ಕುಸಿತವಾಗಿದ್ದರೂ ಕಂಪೆನಿಯ ಒಟ್ಟು ವರಮಾನದಲ್ಲಿ ಶೇ 4ರಷ್ಟು ಹೆಚ್ಚಳವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.