ADVERTISEMENT

ರಿಸರ್ವ್ ಬ್ಯಾಂಕ್ ಒಪ್ಪಿಗೆ

ಎಟಿಎಂ ಬಳಕೆಗೆ ಶುಲ್ಕ

​ಪ್ರಜಾವಾಣಿ ವಾರ್ತೆ
Published 4 ಜನವರಿ 2014, 19:30 IST
Last Updated 4 ಜನವರಿ 2014, 19:30 IST

ಮುಂಬೈ(ಪಿಟಿಐ): ಬ್ಯಾಂಕ್‌ಗಳು ‘ಎಟಿಎಂ’ ಸೇವಾ ಶುಲ್ಕವನ್ನು ನ್ಯಾಯಸಮ್ಮತ ಪ್ರಮಾಣದಲ್ಲಿ ನಿಗದಿಪಡಿಸಲು ಸ್ವತಂತ್ರವಾಗಿವೆ. ಈ ಬಗ್ಗೆ ‘ಭಾರತೀಯ ರಿಸರ್ವ್ ಬ್ಯಾಂಕ್‌’ನಿಂದ  (ಆರ್‌ಬಿಐ) ಯಾವುದೇ  ಆಕ್ಷೇಪಣೆ ಇಲ್ಲ’ ಎಂದು ‘ಆರ್‌ಬಿಐ’ ಡೆಪ್ಯುಟಿ ಗವರ್ನರ್‌ ಕೆ.ಸಿ.ಚಕ್ರವರ್ತಿ ಹೇಳಿದ್ದಾರೆ.

ಇಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಚಕ್ರವರ್ತಿ, ‘ಎಟಿಎಂ’ ಸೇವಾ ಶುಲ್ಕ ಹೆಚ್ಚಿಸುವ ಸಂಬಂಧ ಈವರೆಗೂ ಯಾವುದೇ ಬ್ಯಾಂಕ್‌ನಿಂದ ಮನವಿ ಬಂದಿಲ್ಲ. ಒಂದು ವೇಳೆ ಬ್ಯಾಂಕ್‌ಗಳು ನಷ್ಟ ಅನುಭವಿಸುತ್ತಿದ್ದರೆ, ವರಮಾನ ಗಳಿಕೆ ಕಡಿಮೆ ಆಗಿದ್ದರೆ ಶುಲ್ಕ ಹೆಚ್ಚಳದ ಹೊರತಾಗಿ ಬೇರಾವುದೇ ಆಯ್ಕೆ ಇಲ್ಲ.

ಆದರೆ, ಶುಲ್ಕ ಹೆಚ್ಚಳ ಪ್ರಮಾಣ ಮಾರುಕಟ್ಟೆಗೆ ಅನುಗುಣವಾಗಿ ಸ್ಪರ್ಧಾತ್ಮಕವಾಗಿಯೇ ಇರಬೇಕು’ ಎಂದು ’ ಎಂದು ಸ್ಪಷ್ಟಪಡಿಸಿದರು
ಬ್ಯಾಂಕ್‌ಗಳ ಆರ್ಥಿಕ ಸಾಮರ್ಥ್ಯವನ್ನು ಮತ್ತಷ್ಟು ಸದೃಢಗೊಳಿಸುವ ಸಲು­ವಾಗಿ, ಗ್ರಾಹಕರ ಎಟಿಎಂ ಸೇವೆ ಬಳಕೆ ಶುಲ್ಕವನ್ನು ಹೆಚ್ಚಿಸಬೇಕಿದೆ ಎಂಬ ಅಭಿಪ್ರಾಯ ಬ್ಯಾಂಕಿಂಗ್‌ ವಲಯದಿಂದ ಕೇಳಿಬರುತ್ತಿರುವ ಬೆನ್ನಲ್ಲೇ ‘ಆರ್‌ಬಿಐ’ ಪ್ರತಿ­ಕ್ರಿಯೆ ಹೊರಬಿದ್ದಿದೆ.

ಸದ್ಯ ಗ್ರಾಹಕರು ತಮ್ಮ ಖಾತೆ ಇರುವ ಬ್ಯಾಂಕ್‌ನ ‘ಎಟಿಎಂ’ನ ಸೌಲಭ್ಯವನ್ನು ತಿಂಗಳಲ್ಲಿ ಎಷ್ಟು ಬಾರಿ ಬೇಕಾದರೂ ಪಡೆದುಕೊಳ್ಳ­ಬಹುದಾಗಿದೆ. ಆದರೆ, ಇತರೆ ಬ್ಯಾಂಕ್‌ಗಳ ‘ಎಟಿಎಂ’ ಬಳಕೆಯನ್ನು ತಿಂಗಳಿಗೆ 5 ಬಾರಿಗೆ ಮಿತಿಗೊಳಿಸಲಾಗಿದೆ. ನಂತರದ ಪ್ರತಿ ವ್ಯವಹಾರಕ್ಕೆ ತೆರಿಗೆ ಸೇರಿ ರೂ 15­ರಂತೆ ಶುಲ್ಕವನ್ನು ಖಾತೆದಾರರ ಬ್ಯಾಂಕ್‌ ಇತರೆ ಬ್ಯಾಂಕ್‌ಗೆ ಪಾವತಿಸಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.