ADVERTISEMENT

ವರ್ಷಾಂತ್ಯಕ್ಕೆ ಫ್ರ್ಯುಡೆನ್‌ಬರ್ಗ್‌ ಘಟಕ

ಪಿಟಿಐ
Published 23 ಮೇ 2017, 19:30 IST
Last Updated 23 ಮೇ 2017, 19:30 IST
ವರ್ಷಾಂತ್ಯಕ್ಕೆ ಫ್ರ್ಯುಡೆನ್‌ಬರ್ಗ್‌ ಘಟಕ
ವರ್ಷಾಂತ್ಯಕ್ಕೆ ಫ್ರ್ಯುಡೆನ್‌ಬರ್ಗ್‌ ಘಟಕ   

ಬೆಂಗಳೂರು: ‘ಭಾರತದಲ್ಲಿಯೇ ತಯಾರಿಸಿ’ ಕಲ್ಪನೆಗೆ ಪೂರಕವಾಗಿ ಜರ್ಮನಿಯ ಜಾಗತಿಕ ತಂತ್ರಜ್ಞಾನ ಪೂರೈಕಾ ಸಂಸ್ಥೆ ಫ್ರ್ಯುಡೆನ್‌ಬರ್ಗ್‌ ಚೆನ್ನೈನಲ್ಲಿ ಹೊಸ ತಯಾರಿಕಾ ಘಟಕ ಆರಂಭಿಸುವುದಾಗಿ ಹೇಳಿದೆ.

“ಚೆನ್ನೈ ಹೊರವಲಯದಲ್ಲಿರುವ ವಲ್ಲಂ –ವಾಡಗಲ್‌ ಕೈಗಾರಿಕಾ ಪಾರ್ಕ್‌ನಲ್ಲಿ ಘಟಕ ಸ್ಥಾಪನೆಗೆ ₹111 ಕೋಟಿ  ಬಂಡವಾಳ ತೊಡಗಿಸಲಾಗುವುದು’ ಎಂದು ಸಂಸ್ಥೆಯ ಸಿಇಒ ಡಾ. ಮೊಹ್ಸಿನ್‌ ಸೋಹಿ  ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ವರ್ಷಾಂತ್ಯದ ವೇಳೆಗೆ ಈ ಘಟಕ ಕಾರ್ಯಾರಂಭ ಮಾಡಲಿದೆ. ವಾಹನ ತಯಾರಿಕಾ ವಲಯ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಅಗತ್ಯ ಸೇವೆ ಒದಗಿಸಲಿದೆ’ ಎಂದರು.

ADVERTISEMENT

ವಿದ್ಯುತ್‌ ಚಾಲಿತ ಕಾರುಗಳಿಗೆ ಬ್ಯಾಟರಿ: ‘ಮುಂದಿನ ಕೆಲವು ವರ್ಷಗಳಲ್ಲಿ ಸಾರಿಗೆ ಸಂಪರ್ಕ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆಗಳಾಗಲಿವೆ. ಅದಕ್ಕೆ ಪೂರಕವಾಗಿ ಕಂಪೆನಿ ಉತ್ಪನ್ನಗಳಲ್ಲಿಯೂ ಮಾರ್ಪಾಡು ಮಾಡಿಕೊಳ್ಳಲಿದೆ. ವಿದ್ಯುತ್‌ ಚಾಲಿತ ಕಾರುಗಳಿಗೆ ಹೆಚ್ಚು ಸುರಕ್ಷತೆ ಹೊಂದಿರುವ  ಬ್ಯಾಟರಿಗಳನ್ನು ಕಂಪೆನಿ ಸಿದ್ಧಪಡಿಸಲಿದೆ’ ಎಂದರು.

‘ಬೆಂಗಳೂರಿನಲ್ಲಿ ಪರಿಕ್ರಮಣ ಸ್ವಯಂ ಸೇವಾ ಸಂಸ್ಥೆಯ ಜತೆ ಕೈಜೋಡಿಸಿರುವ ಫ್ರ್ಯುಡೆನ್‌ಬರ್ಗ್‌, ನಗರದ ಕೊಳೆಗೇರಿ ಮಕ್ಕಳಿಗೆ
ಶಿಕ್ಷಣ ನೀಡುವ ಮತ್ತು ಪರಿಸರ ರಕ್ಷಣೆಯಂತಹ ಸಾಮಾಜಿಕ ಹೊಣೆಗಾರಿಕೆ ಕಾರ್ಯದಲ್ಲಿ ತೊಡಗಿದೆ’ ಎಂದು ಸಂವಹನ ಅಧಿಕಾರಿ ಕಾರ್ನಿಲಿಯಾ ಬುಚ್ತಾ ನೋವಾಕ್‌ ಅವರ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.