ADVERTISEMENT

ವಾಣಿಜ್ಯ ಕರೆ: ದಂಡ ಕಡಿತ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2013, 19:30 IST
Last Updated 3 ಡಿಸೆಂಬರ್ 2013, 19:30 IST

ನವದೆಹಲಿ(ಪಿಟಿಐ): ಟೆಲಿಮಾರ್ಕೆ­ಟಿಂಗ್‌ ಕರೆ­ಗಳ ಮೇಲೆ ವಿಧಿಸುತ್ತಿದ್ದ ದಂಡದ ಪ್ರಮಾಣ­ವನ್ನು ಭಾರ­ತೀಯ ದೂರಸಂಪರ್ಕ ನಿಯಂ­ತ್ರಣ ಪ್ರಾಧಿಕಾರ (ಟ್ರಾಯ್‌) ತುಸು ತಗ್ಗಿಸಿದೆ.

ದೂರವಾಣಿ ಸೇವಾ ಸಂಸ್ಥೆಗಳ ವಿರುದ್ಧ ಒಂದು ವಾರದಲ್ಲಿ 50ಕ್ಕಿಂತ ಕಡಿಮೆ ದೂರುಗಳು ದಾಖಲಾದರೆ ಭಾರಿ ದಂಡದಿಂದ ವಿನಾಯ್ತಿ ಲಭಿಸ­ಲಿದೆ. ಈ ಮೊದಲು ಒಂದು ದೂರಿಗೆ ₨5 ಸಾವಿರದಂತೆ ದಂಡ ವಿಧಿಸಲಾಗುತ್ತಿತ್ತು.

ಪರಿಷ್ಕೃತ ನೀತಿಯಂತೆ ದೂರುಗಳ ಸಂಖ್ಯೆ 50ರಿಂದ 300ರ ಒಳಗಿದ್ದರೆ  ಪ್ರತಿ ದೂರಿಗೆ ₨1ಸಾವಿರದಂತೆ, 300ರಿಂದ 700ರ ಒಳಗಿದ್ದರೆ ₨2 ಸಾವಿರದಂತೆ ಹಾಗೂ 700ರ ಮೇಲಿನ ದೂರುಗಳಿಗೆ ತಲಾ ₨5 ಸಾವಿರದಂತೆ ದಂಡ ವಿಧಿಸಲಾ ಗುವುದು ಎಂದು ‘ಟ್ರಾಯ್‌’ ಪ್ರಕಟಣೆ ತಿಳಿಸಿದೆ.

‘ಅನಪೇಕ್ಷಿತ ವಾಣಿಜ್ಯ ಕರೆ, ಎಸ್‌ಎಂ ಎಸ್‌ಗಳ ಹಾವಳಿ ತಡೆಯಲು ದೂರ ವಾಣಿ ಸೇವಾ ಪೂರೈಕೆ ಕಂಪೆನಿಗಳು ಈಗಾಗಲೇ ಸಾಕಷ್ಟು ಕ್ರಮ ಕೈಗೊಂಡಿವೆ. ಈಗ ಪ್ರತಿ ವಾರ ದಾಖಲಾಗುವ ದೂರು ಗಳ ಸಂಖ್ಯೆ 12 ಸಾವಿರದಿಂದ ಸರಾಸರಿ 4 ಸಾವಿರಕ್ಕೆ ತಗ್ಗಿದೆ. ಈ ನಿಟ್ಟಿನಲ್ಲಿ ತುಸು ವಿನಾಯ್ತಿ ನೀಡಲಾಗಿದೆ’ ಎಂದು ‘ಟ್ರಾಯ್‌’ ಸ್‍ಪಷ್ಟಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.