ADVERTISEMENT

ವಿಜಯ ಬ್ಯಾಂಕ್‌ಗೆ ₹ 185 ಕೋಟಿ ನಿವ್ವಳ ಲಾಭ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2017, 19:30 IST
Last Updated 26 ಅಕ್ಟೋಬರ್ 2017, 19:30 IST
ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಆರ್‌. ಎ. ಶಂಕರ ನಾರಾಯಣ (ಮಧ್ಯದಲ್ಲಿ) ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕಾರ್ಯನಿರ್ವಾಹಕ ನಿರ್ದೇಶಕರಾದ ಬಿ. ಎಸ್‌. ರಾಮರಾವ್‌ ಮತ್ತು ವೈ. ನಾಗೇಶ್ವರ ರಾವ್‌ ಇದ್ದರು
ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಆರ್‌. ಎ. ಶಂಕರ ನಾರಾಯಣ (ಮಧ್ಯದಲ್ಲಿ) ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕಾರ್ಯನಿರ್ವಾಹಕ ನಿರ್ದೇಶಕರಾದ ಬಿ. ಎಸ್‌. ರಾಮರಾವ್‌ ಮತ್ತು ವೈ. ನಾಗೇಶ್ವರ ರಾವ್‌ ಇದ್ದರು   

ಬೆಂಗಳೂರು: ಸರ್ಕಾರಿ ಸ್ವಾಮ್ಯದ ವಿಜಯ ಬ್ಯಾಂಕ್‌, ದ್ವಿತೀಯ ತ್ರೈಮಾಸಿಕದಲ್ಲಿ ₹ 185.46 ಕೋಟಿಗಳಷ್ಟು ನಿವ್ವಳ ಲಾಭ ಗಳಿಸಿದ್ದು, ಶೇ 20ರಷ್ಟು ಏರಿಕೆ ದಾಖಲಿಸಿದೆ.

2016–17ನೇ ಹಣಕಾಸು ವರ್ಷದ ಇದೇ ಅವಧಿಯಲ್ಲಿನ ನಿವ್ವಳ ಲಾಭವು ₹ 154.55 ಕೋಟಿಗಳಷ್ಟಿತ್ತು.

‘ಬ್ಯಾಂಕ್‌ನ ಒಟ್ಟು ವರಮಾನವು ವರ್ಷದ ಹಿಂದಿನ ₹ 3516 ಕೋಟಿಗಳಿಂದ ₹ 3,501 ಕೋಟಿಗಳಿಗೆ ಇಳಿದಿದೆ’ ಎಂದು ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಆರ್‌. ಎ. ಶಂಕರ ನಾರಾಯಣ ಅವರು ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ADVERTISEMENT

‘ಒಟ್ಟು ವೆಚ್ಚವು ವರ್ಷದ ಹಿಂದಿನ ₹ 2,945 ಕೋಟಿಗಳಿಂದ ₹ 2,767 ಕೋಟಿಗಳಿಗೆ ಇಳಿದಿದೆ. ಒಟ್ಟು ವಸೂಲಾಗದ ಸಾಲ (ಎನ್‌ಪಿಎ) ಶೇ 7.06ಕ್ಕೆ ಮತ್ತು ನಿವ್ವಳ ‘ಎನ್‌ಪಿಎ’ ಶೇ 5.1 ರಿಂದ ಶೇ 4.86ಗೆ ಇಳಿದಿದೆ’ ಎಂದರು.

ಮುಂಬೈ ಷೇರುಪೇಟೆಯಲ್ಲಿ ಬ್ಯಾಂಕ್‌ನ ಷೇರು ಗುರುವಾರದ ವಹಿವಾಟಿನಲ್ಲಿ ಶೇ 0.08ರಷ್ಟು ಕಡಿಮೆ ಬೆಲೆಗೆ (₹ 66) ವಹಿವಾಟು ನಡೆಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.