ನವದೆಹಲಿ (ಪಿಟಿಐ): ದಿನದಿಂದ ದಿನಕ್ಕೆ ಜೀವನ ವೆಚ್ಚ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕಂಪೆನಿಗಳು ಹೊಸ ಹಣಕಾಸು ವರ್ಷದಲ್ಲಿ ತಮ್ಮ ಉದ್ಯೋಗಿಗಳ ವೇತವನ್ನು ಶೇ 40ರಷ್ಟು ಹೆಚ್ಚಿಸುವ ಸಾಧ್ಯತೆ ಇದೆ. ಹಣದುಬ್ಬರ ದರ ಹೆಚ್ಚಿರುವುದರಿಂದ ಆಹಾರ ಧಾನ್ಯಗಳು, ಹಣ್ಣುಗಳು, ತರಕಾರಿಗಳು ತುಟ್ಟಿಯಾಗಿವೆ. ಇತರೆ ಸರಕುಗಳ ಬೆಲೆಯೂ ಹೆಚ್ಚಿದೆ. ಇದು ಜನರ ಜೀವನ ವೆಚ್ಚದ ಮೇಲೆ ನೇರ ಪರಿಣಾಮ ಬೀರುತ್ತಿದೆ.
ಈ ಹಿನ್ನೆಲೆಯಲ್ಲಿ ಉದ್ಯೋಗಿಗಳ ವೇತನ ಹೆಚ್ಚಿಸುವ ಕುರಿತು ಕಂಪೆನಿಗಳು ಚಿಂತಿಸುತ್ತಿವೆ ಎಂದು ಗ್ಲೋಬಲ್ ಹಂಟ್ಸ್ ಸಂಸ್ಥೆಯ ನಿರ್ದೇಶಕ ಸುನಿಲ್ ಗೋಯಲ್ ತಿಳಿಸಿದ್ದಾರೆ.ಮತ್ತೊಮ್ಮೆ ಅತಿ ಹೆಚ್ಚಿನ ವೇತನ ಹೆಚ್ಚಳಕ್ಕೆ ಭಾರತ ಸಾಕ್ಷಿಯಾಗಲಿದ್ದು, ಎಲ್ಲಾ ಶ್ರೇಣಿಗಳ ಉದ್ಯೋಗಿಗಳ ವೇತನ ಹೆಚ್ಚಲಿದೆ ಎಂದು ಜಾಗತಿಕ ಮಾನವ ಸಂಪನ್ಮೂಲ ಸಂಸ್ಥೆ ಆನ್ ಹೆವಿಟ್ ಹೇಳಿದೆ. ಕಳೆದ ವರ್ಷ ಶೇ 11.4 ರಷ್ಟು ವೇತನ ಹೆಚ್ಚಳವಾಗಿತ್ತು. ಪ್ರಸಕ್ತ ಅವಧಿಯಲ್ಲಿ ಅದು ಶೇ 12.7ರಷ್ಟಾಗಲಿದೆ ಎಂದು ಸಂಸ್ಥೆ ವಿಶ್ವಾಸ ವ್ಯಕ್ತಪಡಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.