ADVERTISEMENT

ವೈಮಾನಿಕ ಕ್ಷೇತ್ರದಲ್ಲಿ ಹೂಡಿಕೆಗೆ ಮನವಿ ಮಾಡಿದ ಕುಮಾರಸ್ವಾಮಿ

ಸಹಕಾರ ನೀಡುವುದಾಗಿ ಭರವಸೆ

​ಪ್ರಜಾವಾಣಿ ವಾರ್ತೆ
Published 7 ಜೂನ್ 2018, 19:30 IST
Last Updated 7 ಜೂನ್ 2018, 19:30 IST
ಮುಖ್ಯಮಂತ್ರಿ‌ ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಶುಭಕೋರಿದ ಫ್ರಾನ್ಸ್‌ ರಾಯಭಾರಿ ಅಲೆಕ್ಸಾಂಡರ್‌. ಸರ್ಕಾರದ ಮುಖ್ಯ ಕಾರ್ಯದರ್ಶಿ  ಕೆ.ರತ್ನಪ್ರಭಾ ಇದ್ದಾರೆ
ಮುಖ್ಯಮಂತ್ರಿ‌ ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಶುಭಕೋರಿದ ಫ್ರಾನ್ಸ್‌ ರಾಯಭಾರಿ ಅಲೆಕ್ಸಾಂಡರ್‌. ಸರ್ಕಾರದ ಮುಖ್ಯ ಕಾರ್ಯದರ್ಶಿ ಕೆ.ರತ್ನಪ್ರಭಾ ಇದ್ದಾರೆ   

ಬೆಂಗಳೂರು: ರಾಜ್ಯದಲ್ಲಿ ವೈಮಾನಿಕ ಮತ್ತು ಇತರ ಉದ್ಯಮಗಳ ಕ್ಷೇತ್ರದಲ್ಲಿ ಬಂಡವಾಳ ಹೂಡುವಂತೆ ಮುಖ್ಯಮಂತ್ರಿ ಎಚ್‌. ಡಿ. ಕುಮಾರಸ್ವಾಮಿ ಫ್ರಾನ್ಸ್‌ಗೆ ಮನವಿ ಮಾಡಿದ್ದಾರೆ.

ಇಲ್ಲಿ ಬಂಡವಾಳ ಹೂಡಲು ಮುಂದೆ ಬಂದರೆ ಎಲ್ಲ ರೀತಿ ಸಹಕಾರ ನೀಡುವುದಾಗಿ ತಮ್ಮನ್ನು ಗುರುವಾರ ಭೇಟಿ ಮಾಡಿದ ಫ್ರಾನ್ಸ್ ರಾಯಭಾರಿ ಎಚ್. ಇ.ಅಲೆಕ್ಸಾಂಡ್ರೆ ಝೈಗ್ಲರ್ ಮತ್ತು ಕಾನ್ಸುಲ್ ಜನರಲ್ ಆಫ್ ಫ್ರಾನ್ಸ್ ಫ್ರಾನ್ಸಿಕೋಯ್ಸ್ ಗಾಟಿಯರ್ ಅವರಿಗೆ ಭರವಸೆ ನೀಡಿದರು.

‘ಕಸ ವಿಲೇವಾರಿಗೆ ಸಂಬಂಧಿಸಿದಂತೆ ಬೆಂಗಳೂರು ಮಹಾ ನಗರಪಾಲಿಕೆಯು ಈಗಾಗಲೇ ಫ್ರಾನ್ಸ್ ಜತೆಗೆ ಒಪ್ಪಂದ ಮಾಡಿಕೊಂಡಿದೆ. ಬೆಂಗಳೂರನ್ನು ಸಂಪೂರ್ಣ ಕಸ ಮುಕ್ತವಾಗಿಸಲು ಆದ್ಯತೆಯ ಮೇಲೆ ಕಾರ್ಯ ನಿರ್ವಹಿಸಬೇಕಾಗಿದೆ’ ಎಂದು ಅವರು ಹೇಳಿದರು.

ADVERTISEMENT

ಬೆಂಗಳೂರು ಹವಾಮಾನವು ಕೈಗಾರಿಕೆಗಳ ಸ್ಥಾಪನೆಗೆ ಸಹಕಾರಿಯಾಗಿದೆ, ಭಾರತೀಯ ವಿಜ್ಞಾನ ಸಂಸ್ಥೆಗೂ ಭೇಟಿ ನೀಡಿದ್ದೇವೆ. ಕರ್ನಾಟಕ ಜ್ಞಾನಾಧಾರಿತವಾದ ಸಂಸ್ಥೆಗಳ ಸ್ಥಾಪನೆಗೂ ಅನುಕೂಲಕಾರಿಯಾಗಿದೆ. ಈ ಕುರಿತು ನಮ್ಮ ದೇಶದ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಚರ್ಚಿಸುತ್ತೇವೆ’ ಎಂದು ಫ್ರಾನ್ಸ್ ಪ್ರತಿನಿಧಿಗಳು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.