ADVERTISEMENT

ಶಿಖರ್‌ ಧವನ್ ಕೆನರಾ ಬ್ಯಾಂಕ್‌ ಪ್ರಚಾರ ರಾಯಭಾರಿ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2014, 19:30 IST
Last Updated 12 ಮಾರ್ಚ್ 2014, 19:30 IST

ನವದೆಹಲಿ: ಭಾರತ ಕ್ರಿಕೆಟ್‌ ತಂಡದ ಆಟಗಾರ ಶಿಖರ್‌ ಧವನ್‌ ಅವರು ಕೆನರಾ ಬ್ಯಾಂಕ್‌ನ ಪ್ರಚಾರ ರಾಯಭಾರಿಯಾಗಿ ನೇಮಕವಾಗಿದ್ದಾರೆ. ‘ಕೆನರಾ ಬ್ಯಾಂಕ್‌ ಈ ಗೌರವ ನೀಡಿರುವದರಿಂದ ಅತೀವ ಸಂತೋಷವಾಗಿದೆ’ ಎಂದು ಧವನ್‌ ಪ್ರತಿಕ್ರಿಯಿಸಿದ್ದಾರೆ.

ಹೆಸರಾಂತ ಕ್ರಿಕೆಟ್‌ ಆಟಗಾರ ಶಿಖರ್‌ ದವನ್‌ ಅವರನ್ನು ಬ್ಯಾಂಕ್‌ನ ಪ್ರಚಾರ ರಾಯಭಾರಿಯಾಗಿ ನೇಮಿಸಿಕೊಂಡಿರುವುದರಿಂದ ಮುಂಬರುವ ದಿನಗಳಲ್ಲಿ ಯುವ ಗ್ರಾಹಕರನ್ನು ಹೆಚ್ಚು ಆಕರ್ಷಿಸಲು ಅವಕಾಶವಾಗಲಿದೆ. ಆ ಮೂಲಕ ದೇಶದ ಯುವಜನರಿಗೆ ಹೆಚ್ಚಿನ ಬ್ಯಾಂಕಿಂಗ್ ಸೇವೆ ಒದಗಿಸಲೂ ಸಾಧ್ಯವಾಗಲಿದೆ ಎಂದು ಕೆನರಾ ಬ್ಯಾಂಕ್‌  ಅಧ್ಯಕ್ಷ ಆರ್‌.ಕೆ.ದುಬೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.