ADVERTISEMENT

ಶೀಘ್ರವೇ ಈರುಳ್ಳಿ ಖರೀದಿ: ನಾಫೆಡ್‌

ಪಿಟಿಐ
Published 14 ಏಪ್ರಿಲ್ 2018, 19:30 IST
Last Updated 14 ಏಪ್ರಿಲ್ 2018, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ರಾಷ್ಟ್ರೀಯ ಕೃಷಿ ಸಹಕಾರಿ ಮಾರುಕಟ್ಟೆ ಒಕ್ಕೂಟವು (ನಾಫೆಡ್‌) ಮಹಾರಾಷ್ಟ್ರದಲ್ಲಿ 25 ಸಾವಿರ ಟನ್‌ ಈರುಳ್ಳಿ ಖರೀದಿಸುವ ಪ್ರಕ್ರಿಯೆಗೆ ಮುಂದಿನ ವಾರ ಚಾಲನೆ ನೀಡಲಿದೆ.

ರೈತರಿಗೆ ಕನಿಷ್ಠ ಬೆಂಬಲ ಬೆಲೆ ಸಿಗುವಂತೆ ಮಾಡಲು ಹಾಗೂ ಬೆಲೆ ನಿಯಂತ್ರಣ ಉದ್ದೇಶದಿಂದ ಹಿಂಗಾರು ಬೆಳೆ ಖರೀದಿಸಲಾಗುವುದು ಎಂದು ವ್ಯವಸ್ಥಾಪಕ ನಿರ್ದೇಶಕ ಸಂಜೀವ್ ಕುಮಾರ್‌ ಛಡ್ಡಾ ತಿಳಿಸಿದ್ದಾರೆ.

‘ನಾಫೆಡ್‌ ಗೋದಾಮಿನಲ್ಲಿ 5 ಸಾವಿರ ಟನ್‌ವರೆಗೆ ಸಂಗ್ರಹಿಸಿ ಇಡಬಹುದು. ಉಳಿದ ಸರಕನ್ನು ಬಾಡಿಗೆ ಗೋದಾಮು ಮತ್ತು ಮಂಡಳಿಗಳಲ್ಲಿ ಸಂಗ್ರಹಿಸಿ ಇಡಲಾಗುವುದು ಎಂದು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.