ADVERTISEMENT

ಶೇ 63 ಷೇರು ಮಾರಿದ ವಿಪ್ರೊ

ಪಿಟಿಐ
Published 7 ಏಪ್ರಿಲ್ 2018, 19:30 IST
Last Updated 7 ಏಪ್ರಿಲ್ 2018, 19:30 IST

ನವದೆಹಲಿ: ಸಾಫ್ಟ್‌ವೇರ್‌ ಸೇವಾ ರಫ್ತು ಸಂಸ್ಥೆ ವಿಪ್ರೊ, ವಿಪ್ರೊ ಏರ್‌ಪೋರ್ಟ್‌ ಐ.ಟಿ.ಯಲ್ಲಿ ಹೊಂದಿದ್ದ ಶೇ 63 ರಷ್ಟು ಷೇರುಗಳನ್ನು ಅಂತರಿಕ್ಷ್ ಸಾಫ್ಟ್‌ಟೆಕ್‌ ಸಂಸ್ಥೆಗೆ ಮಾರಾಟ ಮಾಡಿದೆ.

₹ 3.15 ಕೋಟಿ ಮೊತ್ತದ ಖರೀದಿ ಒಪ್ಪಂದ ಇದಾಗಿದೆ.

ವಿಪ್ರೊ ಏರ್‌ಪೋರ್ಟ್‌ ಐ.ಟಿ. ಸರ್ವೀಸಸ್‌ ಲಿ.ನಲ್ಲಿ ವಿಪ್ರೊ ಮತ್ತು ಡೆಲ್ಲಿ ಇಂಟರ್‌ನ್ಯಾಷನಲ್‌ ಏರ್‌ಪೋರ್ಟ್‌ ಲಿಮಿಟೆಡ್‌ (ಡಿಐಎಎಲ್‌) ಜಂಟಿ ಪಾಲುದಾರಿಕೆ ಹೊಂದಿದ್ದವು.  ಕ್ರಮವಾಗಿ ಶೇ 74 ರಷ್ಟು ಶೇ 26 ರಷ್ಟು ಪಾಲು ಹೊಂದಿದ್ದವು.

ADVERTISEMENT

ಷೇರು ಮಾರಾಟ ಮಾಡುವ ಮೂಲಕ ಮೂರನೇ ಸಂಸ್ಥೆಯನ್ನು (ಅಂತರಿಕ್ಷ್ ಸಾಫ್ಟ್‌ಟೆಕ್‌) ಪರಿಚಯಿಸಲು ಜಂಟಿ ಪಾಲುದಾರಿಕಾ ಸಂಸ್ಥೆಗಳು ಪರಸ್ಪರ ಒಪ್ಪಿಗೆ ನೀಡಿವೆ. ವಿಮಾನ ನಿಲ್ದಾಣ ವಿಸ್ತರಣೆಗೆ ಡಿಐಎಎಲ್‌ ನಿರ್ಧರಿಸಿದ್ದು, ಜಂಟಿ ಪಾಲುದಾರಿಕೆಯಲ್ಲಿ ಹೆಚ್ಚಿನ ಸಂಪತ್ತು ಹೊಂದುವ ಪ್ರಯತ್ನದಲ್ಲಿದೆ.

ಈ ಒಪ್ಪಂದದ ಬಳಿಕವೂ ವಿಪ್ರೊ ಏರ್‌ಪೋರ್ಟ್‌ ಐ.ಟಿ. ಕಂಪನಿಯು ವಿಪ್ರೊಗೆ ನೀಡುತ್ತಿರುವ ವಿಮಾನ ನಿಲ್ದಾಣದ ಐ.ಟಿ ಸೇವೆಗಳ ಹೊರಗುತ್ತಿಗೆ ಮುಂದುವರಿಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.