ADVERTISEMENT

ಷೇರುಪೇಟೆ ಚೇತರಿಕೆ -ಸಮೀಕ್ಷೆ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2012, 19:30 IST
Last Updated 20 ಫೆಬ್ರುವರಿ 2012, 19:30 IST

ನವದೆಹಲಿ (ಪಿಟಿಐ): ಪ್ರವರ್ಧಮಾನಕ್ಕೆ ಬರುತ್ತಿರುವ ದೇಶಗಳಲ್ಲಿ ಷೇರುಪೇಟೆಗಳು ಗಣನೀಯವಾಗಿ ಚೇತರಿಸಿಕೊಳ್ಳುತ್ತಿದ್ದು, ಹೂಡಿಕೆದಾರರಲ್ಲಿ ಆತ್ಮವಿಶ್ವಾಸ ಮರಳಿದೆ ಎಂದು ಜಾಗತಿಕ ಷೇರು ಮಾರುಕಟ್ಟೆ ಅಧ್ಯಯನ ಸಂಸ್ಥೆ  `ಮೆರಿಲ್ ಲಿಂಚ್~ ಹೇಳಿದೆ. 

ಕಳೆದ ತಿಂಗಳಿಗೆ ಹೋಲಿಸಿದರೆ ಷೇರುಪೇಟೆಗಳ ಬಂಡವಾಳ ಮೌಲ್ಯವು ಶೇ 26ರಷ್ಟು ಹೆಚ್ಚಾಗಿದೆ. ಮಾರುಕಟ್ಟೆಯಲ್ಲಿ ಸಾಲದ ಲಭ್ಯತೆ ಹೆಚ್ಚಿರುವುದು, ಹಣದುಬ್ಬರ ಇಳಿಕೆಯಾಗಿರುವುದು, ಆರ್ಥಿಕ ಪುನಶ್ಚೇತನದ ವೇಗ ಹೆಚ್ಚಿರುವುದು ಸೇರಿದಂತೆ ಹಲವು ಸಂಗತಿಗಳು ವಹಿವಾಟು ಚೇತರಿಸಿಕೊಳ್ಳುವಂತೆ ಮಾಡಿದೆ ಎಂದು ಮೆರಿಲ್ ಲಿಂಚ್‌ನ ಜಾಗತಿಕ ಮುಖ್ಯಸ್ಥ ಮೈಕಲ್ ಹೇಳಿದ್ದಾರೆ.

ಪ್ರವರ್ಧಮಾನಕ್ಕೆ ಬರುತ್ತಿರುವ ದೇಶಗಳ ಮಾರುಕಟ್ಟೆಗಳ ನಿಧಿ ನಿರ್ವಹಣೆ ಪ್ರಮಾಣವು ಕಳೆದ ತಿಂಗಳಿಗೆ ಹೋಲಿಸಿದರೆ ಶೇ 20 ರಿಂದ ಶೇ 44ಕ್ಕೆ ಏರಿಕೆ ಪಡೆದಿದೆ. ಚೀನಾ ಅರ್ಥವ್ಯವಸ್ಥೆಯು ಕೂಡ ಮೃದು ಧೋರಣೆ ಅನುಸರಿಸುತ್ತಿದೆ ಎಂದು ಶೇ 86ರಷ್ಟು ಹೂಡಿಕೆದಾರರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ADVERTISEMENT

ಯೂರೋಪ್ ಸಾಲದ ಬಿಕ್ಕಟ್ಟು ಇತ್ಯರ್ಥಕ್ಕೆ  ಸಂಬಂಧಿಸಿದಂತೆ ನಡೆಯುತ್ತಿರುವ ಧನಾತ್ಮಕ ಪ್ರಯತ್ನಗಳು ಅದರಲ್ಲೂ ವಿಶೇಷವಾಗಿ ಗ್ರೀಸ್ ಪರಿಹಾರ ಪ್ಯಾಕೇಜ್ ಘೋಷಣೆಯಿಂದ ಜಾಗತಿಕ ಷೇರುಪೇಟೆಗಳು ಚೇತರಿಸಿಕೊಳ್ಳುವಂತೆ ಮಾಡಿವೆ ಎಂದೂ ಈ  ಸಮೀಕ್ಷೆ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.