ADVERTISEMENT

ಸಗಟು ಹಣದುಬ್ಬರ ಶೇ 2.47ಕ್ಕೆ ಇಳಿಕೆ

ಪಿಟಿಐ
Published 16 ಏಪ್ರಿಲ್ 2018, 19:30 IST
Last Updated 16 ಏಪ್ರಿಲ್ 2018, 19:30 IST

ನವದೆಹಲಿ: ಸಗಟು ಬೆಲೆ ಸೂಚ್ಯಂಕ (ಡಬ್ಲ್ಯುಪಿಐ) ಆಧರಿಸಿದ ಹಣದುಬ್ಬರವು ಮಾರ್ಚ್‌ನಲ್ಲಿ ಶೇ 2.47 ರಷ್ಟಿದೆ. ಫೆಬ್ರುವರಿ ತಿಂಗಳಿನಲ್ಲಿ ಡಬ್ಲ್ಯುಪಿಐ ಶೇ 5.11 ರಷ್ಟಿತ್ತು.

ತರಕಾರಿ ಮತ್ತು ಬೇಳೆಕಾಳುಗಳ ಬೆಲೆಯಲ್ಲಿ ಇಳಿಕೆ ಆಗಿರುವುದರಿಂದ ಸಗಟು ಹಣದುಬ್ಬರದ ದರ ಕಡಿಮೆ ಆಗಿದೆ ಎಂದು ಸರ್ಕಾರದ ವರದಿ ತಿಳಿಸಿದೆ.

ಆಹಾರ ಪದಾರ್ಥಗಳ ಬೆಲೆ ಫೆಬ್ರುವರಿಯಲ್ಲಿ ಶೇ 0.88 ರಷ್ಟು ಏರಿಕೆ ಕಂಡಿತ್ತು. ಅದು ಮಾರ್ಚ್‌ನಲ್ಲಿ ಶೇ 0.29ಕ್ಕೆ ಇಳಿದಿದೆ.ಕಚ್ಚಾ ತೈಲ ಬೆಲೆಯಲ್ಲಿನ ಏರಿಕೆಯು ಇಂಧನ ಮತ್ತು ವಿದ್ಯುತ್‌ ಬೆಲೆಗಳಲ್ಲಿ ಕ್ರಮವಾಗಿ ಶೇ 4.70 ಮತ್ತು ಶೇ 3.81 ರಷ್ಟು ಹೆಚ್ಚಾಗಲು ಕಾರಣವಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.