ಸರಕುಗಳ ತಯಾರಿ ಮತ್ತು ಮಾರಾಟ ಹಾಗೂ ಸೇವೆಗಳ ಬಳಕೆಗೆ ಹೆಚ್ಚು ವ್ಯಾಪಕ ಮತ್ತು ಸಮಗ್ರವಾದ ತೆರಿಗೆ ವಿಧಿಸುವ ವ್ಯವಸ್ಥೆ ಇದು. ಇದು ರಾಷ್ಟ್ರ ಮಟ್ಟದ ತೆರಿಗೆ ವ್ಯವಸ್ಥೆಯಾಗಿರುತ್ತದೆ.
ಉದ್ದೇಶವೇನು?
* ರಾಜ್ಯಗಳು ವಿವಿಧ ತೆರಿಗೆಗಳನ್ನು ವಿಧಿಸುವ ಮೂಲಕ ಈಗ ಜಾರಿಯಲ್ಲಿರುವ ಬಹು ತೆರಿಗೆ ಪದ್ಧತಿಯನ್ನು ರದ್ದುಪಡಿಸುವುದು
* ರಾಷ್ಟ್ರದಾದ್ಯಂತ ಏಕರೂಪದ ತೆರಿಗೆ ವ್ಯವಸ್ಥೆ ಜಾರಿಗೆ ತರುವುದು
* ಇಡೀ ದೇಶದಲ್ಲಿ ಒಂದೇ ರೀತಿಯ ಅರ್ಥ ವ್ಯವಸ್ಥೆ ರೂಪಿಸುವುದು
ಈಗಿನ ವ್ಯವಸ್ಥೆಯ ಸಮಸ್ಯೆಗಳೇನು?
* ಮುಖ್ಯವಾಗಿ ಕೇಂದ್ರ ವ್ಯಾಟ್ ಮತ್ತು ರಾಜ್ಯಗಳ ವ್ಯಾಟ್ ವಿಧಿಸಲಾಗುತ್ತದೆ
* ಇದಲ್ಲದೆ ಇತರ ತೆರಿಗೆಗಳೂ ಇವೆ
* ಹಾಗಾಗಿ ಗ್ರಾಹಕ ಒಂದು ವಸ್ತು ಅಥವಾ ಸೇವೆಯ ಮೇಲೆ ಹಲವು ತೆರಿಗೆಗಳನ್ನು ಪಾವತಿಸಬೇಕಾಗುತ್ತದೆ
* ರಾಜ್ಯ ವ್ಯಾಟ್‌ನಲ್ಲಿ ರಾಜ್ಯದೊಳಗಿನ ವಹಿವಾಟಿಗೆ ವ್ಯಾಟ್‌ನಿಂದ ವಿನಾಯಿತಿ ನೀಡುವ ಅವಕಾಶ ಇದೆ. ಆದರೆ ಅಂತರರಾಜ್ಯ ವಹಿವಾಟಿಗೆ ವಿನಾಯಿತಿ ನೀಡುವುದಕ್ಕೆ ಅವಕಾಶ ಇಲ್ಲ
ಸರ್ಕಾರಕ್ಕೆ ಏನುಲಾಭ
* ಸುಲಭ ತೆರಿಗೆ ವ್ಯವಸ್ಥೆ
* ತೆರಿಗೆ ವ್ಯಾಪ್ತಿ ವಿಸ್ತಾರವಾಗುತ್ತದೆ (ತೆರಿಗೆ ವಿನಾಯಿತಿ ಕಡಿಮೆ, ಬಹುತೇಕ ಎಲ್ಲ ವಸ್ತುಗಳ ಮೇಲೆ ತೆರಿಗೆ ಹೇರಿಕೆ ಅವಕಾಶ)
* ವರಮಾನ ಹೆಚ್ಚಳ
ಪ್ರಯೋಜನಗಳು
* ಎಲ್ಲ ಪರೋಕ್ಷ ತೆರಿಗೆಗಳು ಜಿಎಸ್‌ಟಿಯಲ್ಲಿ ಅಂತರ್ಗತಗೊಳ್ಳುತ್ತವೆ
* ಉದ್ಯಮಗಳು ತೆರಿಗೆ ಪಾವತಿಸುವ ವ್ಯವಸ್ಥೆ ಸರಳವಾಗುತ್ತದೆ. ತೆರಿಗೆ ಬದ್ಧತೆ ಹೆಚ್ಚುತ್ತದೆ
* ಜಿಎಸ್‌ಟಿಯಲ್ಲಿ ಬಹು ಹಂತ ತೆರಿಗೆ ಪಾವತಿಗೆ ಅವಕಾಶ ಇದೆ– ಉತ್ಪಾದನೆ ಮತ್ತು ವಿತರಣೆ ಹಂತಗಳಲ್ಲಿ ಪಾವತಿಸಿದ ತೆರಿಗೆ ಪ್ರಮಾಣವನ್ನು ಅಂತಿಮ ಹಂತದಲ್ಲಿ ಕಳೆಯಲು ಅವಕಾಶ ಇದೆ
* ಇದು ಸ್ವಯಂ ಪ್ರೇರಿತ ತೆರಿಗೆ ಪಾವತಿಗೆ ಉತ್ತೇಜನ ನೀಡುತ್ತದೆ
ತೆರಿಗೆ ಪಾವತಿಸುವವರು ಯಾರು?
ಜಿಎಸ್‌ಟಿ ಎಂದರೆ ಸರಕು ಮತ್ತು ಸೇವೆಯ ಬಳಕೆಯ ಮೇಲಿನ ತೆರಿಗೆ. ಹಾಗಾಗಿ ಅದರ ಬಳಕೆದಾರ ತೆರಿಗೆ ಪಾವತಿಸಬೇಕಾಗುತ್ತದೆ
ಉದ್ಯಮಕ್ಕೆ ಏನು ಉಪಯೋಗ
* ತಯಾರಿಕಾ ಘಟಕಗಳ ಸ್ಥಾಪನೆಯ ನಿರ್ಧಾರ ಕೈಗೊಳ್ಳುವಾಗ ತೆರಿಗೆ ಲಾಭದ ಲೆಕ್ಕಾಚಾರ ಹಾಕುವ ಅಗತ್ಯ ಇಲ್ಲ. ಬದಲಿಗೆ ವ್ಯಾಪಾರ ನಡೆಸಲು ಯಾವ ಸ್ಥಳ ಅನುಕೂಲವೋ ಅಲ್ಲಿಯೇ ತಯಾರಿಕಾ ಘಟಕ ಸ್ಥಾಪನೆ ಮಾಡಬಹುದು.
* ಸರಕು ಬಳಕೆಯಾಗುವ ಸ್ಥಳದಲ್ಲಿ ತೆರಿಗೆ ವಿಧಿಸುವ ವ್ಯವಸ್ಥೆ ಆಗಿರುವುದರಿಂದ ಉತ್ಪಾದನೆ ಹಂತದಲ್ಲಿ ಪಾವತಿಸಲಾಗುವ ತೆರಿಗೆ ಮೊತ್ತ ವಾಪಸ್ ಪಡೆಯುವ ಅವಕಾಶ
* ರಫ್ತು ಹಂತದಲ್ಲಿ ತೆರಿಗೆ ಇರುವ ಸಾಧ್ಯತೆ ಕಡಿಮೆ. ಹಾಗಾಗಿ ಸ್ಪರ್ಧಾತ್ಮಕತೆ ಹೆಚ್ಚು
ದರ ಎಷ್ಟು
* ಜಿಎಸ್‌ಟಿ ದರ ಇನ್ನಷ್ಟೇ ನಿಗದಿಯಾಗಬೇಕು
* ಇದು ಸಂವಿಧಾನ ತಿದ್ದುಪಡಿ ಮಸೂದೆಯ ಭಾಗ ಆಗಿರುವುದಿಲ್ಲ
* ಪ್ರತ್ಯೇಕ ಮಸೂದೆ ಮೂಲಕ ಜಿಎಸ್‌ಟಿ ದರ ನಿಗದಿಪಡಿಸುವ ಸಾಧ್ಯತೆ ಇದೆ
* ಜಿಎಸ್‌ಟಿ ಗರಿಷ್ಠ ದರ ಶೇ 17–18 ಮೀರಬಾರದು ಎಂದು ಮುಖ್ಯ ಆರ್ಥಿಕ ಸಲಹೆಗಾರರ ನೇತೃತ್ವದ ಸಮಿತಿ ಶಿಫಾರಸು ಮಾಡಿದೆ
* ಜಿಎಸ್‌ಟಿ ಗರಿಷ್ಠ ದರ ಶೇ 18 ಮೀರಬಾರದು ಎಂದು ವಿರೋಧ ಪಕ್ಷ ಕಾಂಗ್ರೆಸ್ ಆಗ್ರಹಿಸಿದೆ
* ಜಿಎಸ್‌ಟಿ ದರವನ್ನು ಸಾಧ್ಯವಾದಷ್ಟು ಕಡಿಮೆ ಇರಿಸಲಾಗುವುದು ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.