ADVERTISEMENT

‘ಸಾಯಿಗೋಲ್ಡ್‌ ಹಬ್ಬ’ದ ವಿಶೇಷ ಕೊಡುಗೆಗಳು

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2018, 19:30 IST
Last Updated 29 ಮಾರ್ಚ್ 2018, 19:30 IST

ಬೆಂಗಳೂರು: ನಗರದ ಬಸವನಗುಡಿಯ ಡಿವಿಜಿ ರಸ್ತೆ ಮತ್ತು ಎಚ್‌ಎಸ್‌ಆರ್‌ ಲೇಔಟ್‌ನಲ್ಲಿ ಇರುವ ಸಾಯಿ ಗೋಲ್ಡ್‌ ಪ್ಯಾಲೇಸ್‌ನಲ್ಲಿ ಇರುವ ಅತ್ಯುತ್ತಮ ಗುಣಮಟ್ಟದ ವೈವಿಧ್ಯಮಯ ಚಿನ್ನ, ವಜ್ರದ ಆಭರಣಗಳ ವಿಶಾಲ ಶ್ರೇಣಿಯು ಚಿನ್ನಾಭರಣಪ್ರಿಯರ ಗಮನ ಸೆಳೆಯುತ್ತಿದೆ.

ಆಭರಣಗಳು, ಚಿನ್ನದ ವಿಗ್ರಹ, ನೆಕ್‌ಲೇಸ್‌ಗಳ ದೊಡ್ಡ ಸಂಗ್ರಹವೇ ಇಲ್ಲಿ ಇದೆ. ಎಲ್ಲ ವಯೋಮಾನದವರಿಗೆ ಒಪ್ಪಿಗೆಯಾಗುವ ಆಕರ್ಷಕ ವಿನ್ಯಾಸದ ಆಭರಣಗಳಿಗೆ ಸಾಯಿಗೋಲ್ಡ್‌ ಪ್ಯಾಲೇಸ್‌ ಖ್ಯಾತವಾಗಿದೆ. ಪ್ಲಾಟಿನಂ ಮತ್ತು ಬೆಳ್ಳಿಯ ಆಭರಣಗಳೂ ಇಲ್ಲಿ ದೊರೆಯುತ್ತವೆ. ‘ಸಾಯಿ ಗೋಲ್ಡ್‌ ಹಬ್ಬ’ದ ಪ್ರಯುಕ್ತ  ಚಿನ್ನಾಭರಣಗಳ ಖರೀದಿಗೆ 2 ಗ್ರಾಂಗಳ ಬೆಳ್ಳಿ ನಾಣ್ಯವನ್ನು ಉಚಿತವಾಗಿ ನೀಡಲಾಗುತ್ತಿದೆ. ಮೇಕಿಂಗ್‌ ಚಾರ್ಜ್‌, ವೇಸ್ಟೇಜ್‌ ಚಾರ್ಜ್‌ ಇರುವುದಿಲ್ಲ. ಹಳೆಯ ಚಿನ್ನವನ್ನು ಹೊಸ ಚಿನ್ನಕ್ಕೆ ಬದಲಾಯಿಸಿಕೊಳ್ಳಲೂ ಅವಕಾಶ ಇದೆ. ‘ಸಾಯಿ ಸಂಭ್ರಮ’ ಚಿನ್ನದ ಉಳಿತಾಯ ಯೋಜನೆಯೂ ಜಾರಿಯಲ್ಲಿ ಇದೆ. ಗ್ರಾಹಕರು ಈ ಕೊಡುಗೆಗಳ ಪ್ರಯೋಜನ ಪಡೆದುಕೊಳ್ಳಬೇಕು’ ಎಂದು ಸಾಯಿ ಗೋಲ್ಡ್‌ ಪ್ಯಾಲೇಸ್‌ನ ಮಾಲೀಕ ಟಿ. ಎ. ಶರವಣ ಅವರು ಮನವಿ ಮಾಡಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT