ADVERTISEMENT

‘ಸಿಸಿಐ’ ಒಪ್ಪಿಗೆ ಕೇಳಿದ ವಾಲ್‌ಮಾರ್ಟ್‌

​ಪ್ರಜಾವಾಣಿ ವಾರ್ತೆ
Published 19 ಮೇ 2018, 19:30 IST
Last Updated 19 ಮೇ 2018, 19:30 IST
ಫ್ಲಿಪ್‌ಕಾರ್ಟ್‌
ಫ್ಲಿಪ್‌ಕಾರ್ಟ್‌   

ನವದೆಹಲಿ: ಫ್ಲಿಪ್‌ಕಾರ್ಟ್‌ ಸಂಸ್ಥೆಯಲ್ಲಿ ಹೆಚ್ಚಿನ ಷೇರು ಖರೀದಿಸುವ ಪ್ರಸ್ತಾವನೆಗೆ ಒಪ್ಪಿಗೆ ನೀಡುವಂತೆ ವಾಲ್‌ಮಾರ್ಟ್‌ ಸಂಸ್ಥೆಯು ಭಾರತೀಯ ಸ್ಪರ್ಧಾ ಆಯೋಗವನ್ನು (ಸಿಸಿಐ) ಕೇಳಿದೆ.

ತನ್ನ ಅಂಗಸಂಸ್ಥೆ, ವಾಲ್‌ಮಾರ್ಟ್‌ ಇಂಟರ್‌ನ್ಯಾಷನಲ್‌ ಹೋಲ್ಡಿಂಗ್ಸ್‌ ಮೂಲಕ ಷೇರುಗಳನ್ನು ಖರೀದಿಸಲಾಗುವುದು ಎಂದು ತಿಳಿಸಿದೆ. ಸಿಂಗಪುರದಲ್ಲಿ ನೋಂದಣಿ ಆಗಿರುವ ಫ್ಲಿಪ್‌ಕಾರ್ಟ್‌ ಪ್ರೈವೇಟ್‌ ಲಿಮಿಟೆಡ್‌, ಫ್ಲಿಪ್‌ಕಾರ್ಟ್‌ ಇಂಡಿಯಾದಲ್ಲಿ ಗರಿಷ್ಠ ಪಾಲು ಬಂಡವಾಳ ಹೊಂದಿದೆ. ಫ್ಲಿಪ್‌ಕಾರ್ಟ್‌ನ ಶೇ 77ರಷ್ಟು ಪಾಲು ಬಂಡವಾಳ ಖರೀದಿಯಿಂದ ಫ್ಲಿಪ್‌ಕಾರ್ಟ್‌ ಇಂಡಿಯಾದ ಮಾಲೀಕತ್ವವು ವಾಲ್‌ಮಾರ್ಟ್‌ಗೆ ವರ್ಗಾವಣೆಗೊಳ್ಳಲಿದೆ.

ಸಿಸಿಐ ಮುಖ್ಯಸ್ಥರಿಗೆ ಹುಡುಕಾಟ: ಸಿಸಿಐ ಅಧ್ಯಕ್ಷ ಡಿ.ಕೆ. ಸಿಕ್ರಿ ಅವರ ಅಧಿಕಾರಾವಧಿ 2018ರ ಜುಲೈನಲ್ಲಿ ಮುಕ್ತಾಯವಾಗಲಿದೆ. ಹೀಗಾಗಿ ಸರ್ಕಾರ ಹೊಸ ಅಧ್ಯಕ್ಷರ ಹುಡುಕಾಟ ಆರಂಭಿಸಿದೆ. ಈ ಹುದ್ದೆಗೆ ಕಾರ್ಪೊರೇಟ್‌ ವ್ಯವಹಾರಗಳ ಸಚಿವಾಲಯವು ಅರ್ಜಿಗಳನ್ನು ಆಹ್ವಾನಿಸಿದ್ದು ಜುಲೈ 2ರ ಗಡುವು ನೀಡಿದೆ.

ADVERTISEMENT

ಸಿಕ್ರಿ ಅವರು ಎರಡೂವರೆ ವರ್ಷಗಳ ಅವಧಿಗೆ 2016ರ ಜನವರಿಯಲ್ಲಿ ಅಧಿಕಾರ ಸ್ವೀಕರಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.