ADVERTISEMENT

ಹತ್ತಿ ಉತ್ಪಾದನೆ ಇಳಿಕೆ ಸಂಭವ

ಬಿತ್ತನೆಯಲ್ಲಿ ಇಳಿಕೆ

ಪಿಟಿಐ
Published 9 ಜೂನ್ 2018, 19:30 IST
Last Updated 9 ಜೂನ್ 2018, 19:30 IST
ಹತ್ತಿ ಉತ್ಪಾದನೆ ಇಳಿಕೆ ಸಂಭವ
ಹತ್ತಿ ಉತ್ಪಾದನೆ ಇಳಿಕೆ ಸಂಭವ   

ನವದೆಹಲಿ: 2019ರ ಹತ್ತಿ ವರ್ಷದಲ್ಲಿ (ಅಕ್ಟೋಬರ್‌–ಸೆಪ್ಟೆಂಬರ್‌) ಬಿತ್ತನೆ ಪ್ರದೇಶದಲ್ಲಿ ಇಳಿಕೆಯಾಗಿದೆ. ಇದರಿಂದಾಗಿ ಉತ್ಪಾದನೆ ತಗ್ಗಲಿದ್ದು ಬೆಲೆಯಲ್ಲಿ ಶೇ 10ರಷ್ಟು ಏರಿಕೆಯಾಗುವ ಅಂದಾಜು ಮಾಡಲಾಗಿದೆ.

ರೇಟಿಂಗ್ಸ್‌ ಸಂಸ್ಥೆ ‘ಇಕ್ರಾ’ ನೀಡಿರುವ ವರದಿಯ ಪ್ರಕಾರ, 2018ರ ಹತ್ತಿ ವರ್ಷದಲ್ಲಿ 122 ಲಕ್ಷ ಹೆಕ್ಟೇರ್‌ಗಳಲ್ಲಿ ಹತ್ತಿ ಬಿತ್ತನೆ ಕಾರ್ಯ ನಡೆದಿತ್ತು. ಆದರೆ 2019ರ ಬೆಳೆ ವರ್ಷದಲ್ಲಿ 114 ಲಕ್ಷ ಹೆಕ್ಟೇರ್‌ ಪ್ರದೇಶಗಳಲ್ಲಿ ಮಾತ್ರವೇ ಬಿತ್ತನೆಯಾಗಿದೆ.

2018ರಲ್ಲಿ 3.6 ಕೋಟಿ ಬೇಲ್ಸ್‌ನಷ್ಟು (ಒಂದು ಬೇಲ್ಸ್‌ 170 ಕೆ.ಜಿ) ಹತ್ತಿ ಉತ್ಪಾದನೆ ಆಗಲಿದೆ ಎಂದು ಭಾರತೀಯ ಹತ್ತಿ ಉತ್ಪಾದಕರ ಒಕ್ಕೂಟ ಹೇಳಿದೆ. ಇದಕ್ಕೆ ಹೋಲಿಸಿದರೆ ಈ ಬಾರಿ 3.5 ಕೋಟಿ ಬೇಲ್ಸ್‌ನಷ್ಟು ಮಾತ್ರವೇ ಉತ್ಪಾದನೆ ಆಗಲಿದೆ ಎಂದು ‘ಇಕ್ರಾ’ ತಿಳಿಸಿದೆ.

ADVERTISEMENT

ಪಂಜಾಬ್‌, ಹರಿಯಾಣ ಮತ್ತು ರಾಜಸ್ಥಾನ ಭಾಗಗಳಲ್ಲಿ ಹತ್ತಿ ಬಿತ್ತೆ ಕಾರ್ಯ ನಿಧಾನಗತಿಯಲ್ಲಿ ಆರಂಭವಾಗಿದೆ ಎಂದು ಮಾಹಿತಿ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.