ADVERTISEMENT

1.17ಲಕ್ಷ ಉದ್ಯೋಗಾವಕಾಶ!

ವೈಮಾನಿಕ ಉದ್ಯಮ; 2017ರ ನಿರೀಕ್ಷೆ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2014, 19:30 IST
Last Updated 13 ಮಾರ್ಚ್ 2014, 19:30 IST

ಹೈದರಾಬಾದ್‌(ಪಿಟಿಐ):  ದೇಶದ ವೈಮಾನಿಕ ಉದ್ಯಮ ಕ್ಷೇತ್ರದಲ್ಲಿ ಈಗ ಮಾನವ ಸಂಪನ್ಮೂಲಕ್ಕೆ ಬೇಡಿಕೆ ಹೆಚ್ಚು ತ್ತಿದ್ದು, 2017ರ ವೇಳೆಗೆ ಉದ್ಯೋಗಾ ವಕಾಶಗಳ ಸಂಖ್ಯೆ 1.17 ಲಕ್ಷಕ್ಕೆ ಏರಿಕೆ ಯಾಗಲಿದೆ!

ದೇಶ, ವಿದೇಶದ ವಿಮಾನಯಾನ ಸಂಸ್ಥೆಗಳು ಹೊಸದಾಗಿ ವಿಮಾನಗಳನ್ನು ಖರೀದಿಸುವುದು ಮತ್ತು ಸಂಚಾರ ಮಾರ್ಗಗಳನ್ನು ಹೆಚ್ಚಿಸಿಕೊಳ್ಳಲು ಮುಂದಾಗಿರುವುದರಿಂದ ಸಿಬ್ಬಂದಿ ನೇಮಕ ಪ್ರಕ್ರಿಯೆಯೂ ಚುರುಕುಗೊಳ್ಳ ಲಿದೆ ಎಂದು ಅಧ್ಯಯನ ವರದಿ ಯೊಂದು ತಿಳಿಸಿದೆ.

2011ರಲ್ಲಿ ದೇಶದಲ್ಲಿದ್ದ ವಿಮಾನ ಯಾನ ಸಂಸ್ಥೆಗಳಿಗೆ ಅಗತ್ಯವಾಗಿದ್ದ ಸಿಬ್ಬಂದಿ ಸಂಖ್ಯೆ 62 ಸಾವಿರ. 2017ರ ವೇಳೆಗೆ ಮಾನವ ಸಂಪನ್ಮೂಲದ ಬೇಡಿಕೆ 1.17 ಲಕ್ಷಕ್ಕೆ ಏರಲಿದೆ. ಇದ ರಲ್ಲಿ ಪೈಲಟ್‌ಗಳು, ಕ್ಯಾಬಿನ್‌ ಸಿಬ್ಬಂದಿ, ಏರ್‌ಕ್ರಾಫ್ಟ್‌ ಎಂಜಿನಿಯರ್‌ಗಳು ಮತ್ತು ತಂತ್ರಜ್ಞರು, ನಿಲ್ದಾಣದಲ್ಲಿನ ಚಟುವಟಿಕೆಗೆ ಅಗತ್ಯವಾದ ಸಿಬ್ಬಂದಿ, ಸರಕುಗಳ ನಿರ್ವಹಣೆಗಾರರು, ಆಡಳಿತ ಮತ್ತು ಟಿಕೆಟ್‌ ಮಾರಾಟ ವಿಭಾಗದ ಹುದ್ದೆಗಳಿಗೂ ಹೆಚ್ಚಿನ ಸಂಖ್ಯೆಯಲ್ಲಿ ನೌಕರರ ಅಗತ್ಯ ಬೀಳಲಿದೆ ಎಂದು ನಾಗರಿಕ ವಿಮಾನಯಾನ ಇಲಾಖೆ ಕಾರ್ಯದರ್ಶಿ ಅಶೋಕ್‌ ಲವಾಸಾ ಇಲ್ಲಿ ಹೇಳಿದರು.

‘ಫಿಕ್ಕಿ ಕೆಪಿಎಂಜಿ’ ನಡೆಸಿದ ‘ವೈಮಾ ನಿಕ ಸಂಪರ್ಕ ಮಾರ್ಗ ವಿಸ್ತರಣೆ’ ಕುರಿತ ಅಧ್ಯಯನ ವರದಿಯನ್ನು ಇಲ್ಲಿ ನಡೆ ಯುತ್ತಿರುವ ‘ಭಾರತ ವೈಮಾನಿಕ ಪ್ರದ ರ್ಶನ’ದಲ್ಲಿ ಗುರುವಾರ ಬಿಡುಗಡೆ ಮಾಡಿ ಅವರು ಮಾತನಾಡಿದರು.
ಅಲ್ಲದೆ, ವೈಮಾನಿಕ ಉದ್ಯಮ ಕ್ಷೇತ್ರ ದಲ್ಲಿ ಪರೋಕ್ಷವಾಗಿಯೂ ಆರು ಪಟ್ಟು ಅಧಿಕ, ಅಂದರೆ 10 ಲಕ್ಷ  ಉದ್ಯೋಗಾ ವಕಾಶಗಳು ಸೃಷ್ಟಿಯಾಗಲಿವೆ ಎಂದು ಅವರು ಹೇಳಿದರು.

ಪ್ರಸ್ತುತ 400ಕ್ಕೂ ಅಧಿಕ ವಿಮಾನ ಗಳ ಸಂಚಾರದೊಂದಿಗೆ ವಿಶ್ವದ ನಾಗ ರಿಕ ವಿಮಾನಯಾನ ಕ್ಷೇತ್ರದಲ್ಲಿ 9ನೇ ಸ್ಥಾನದಲ್ಲಿರುವ ಭಾರತ, 2020ರ ವೇಳೆಗೆ 1000 ವಿಮಾನಗಳನ್ನು ಹೊಂದಿರಲಿದೆ. ಆ ಮೂಲಕ ಮೂರನೇ ಸ್ಥಾನಕ್ಕೆ ಜಿಗಿಯಲಿದೆ ಎಂದು ‘ವೈಮಾ ನಿಕ ಸಂಪರ್ಕ ಮಾರ್ಗ ವಿಸ್ತರಣೆ’ ಕುರಿತ ಅಧ್ಯಯನ ವರದಿಯಲ್ಲಿ ವಿವರಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.