ನವದೆಹಲಿ : ರಾಜ್ಯಗಳ ಮಧ್ಯೆ ನಡೆಯುವ ಸರಕುಗಳ ಸಾಗಾಣಿಕೆಗೆ ಇ–ವೇ ಬಿಲ್ ವ್ಯವಸ್ಥೆ ದೇಶದಾದ್ಯಂತ ಭಾನುವಾರದಿಂದ ಜಾರಿಗೆ ಬಂದಿದ್ದು, ಮೊದಲ ದಿನವೇ 1.7 ಲಕ್ಷ ಬಿಲ್ ಸೃಷ್ಟಿಯಾಗಿವೆ.
₹ 50 ಸಾವಿರಕ್ಕಿಂತ ಹೆಚ್ಚಿನ ಮೊತ್ತದ ಸರಕು ಸಾಗಣೆಗೆ ಕಡ್ಡಾಯವಾಗಿ ಇ–ವೇ ಬಿಲ್ ಪಡೆಯಬೇಕು. ವ್ಯವಸ್ಥೆಯು ಯಾವುದೇ ಸಮಸ್ಯೆ ಇಲ್ಲದೆ ಸುಗಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಜಿಎಸ್ಟಿಎನ್ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.