ADVERTISEMENT

2018ರಲ್ಲಿ ಜಿಡಿಪಿ ಶೇ 7.2 ರಷ್ಟು ವೃದ್ಧಿ ವಿಶ್ವಸಂಸ್ಥೆ ನಿರೀಕ್ಷೆ

ಪಿಟಿಐ
Published 12 ಡಿಸೆಂಬರ್ 2017, 19:30 IST
Last Updated 12 ಡಿಸೆಂಬರ್ 2017, 19:30 IST

ವಿಶ್ವಸಂಸ್ಥೆ: ಭಾರತದ ಆರ್ಥಿಕ ಪ್ರಗತಿ ದರವು 2018–19ರಲ್ಲಿ ಶೇ 7.2 ರಷ್ಟು ವೃದ್ಧಿ ಕಾಣಲಿದ್ದು, 2019–20ರಲ್ಲಿ ಶೇ 7.4ಕ್ಕೆ ಏರಿಕೆಯಾಗಲಿದೆ ಎಂದು ವಿಶ್ವಸಂಸ್ಥೆ ಹೇಳಿದೆ.

ಭಾರತದ ಆರ್ಥಿಕ ಮುನ್ನೋಟ ಸಕಾರಾತ್ಮಕವಾಗಿ ಗೋಚರಿಸುತ್ತಿದೆ. ಖಾಸಗಿ ಉಪಭೋಗ ಗರಿಷ್ಠ ಮಟ್ಟದಲ್ಲಿದೆ. ಸರ್ಕಾರಿ ಹೂಡಿಕೆ ಮತ್ತು ರಚನಾತ್ಮಕ ಸುಧಾರಣಾ ಕ್ರಮಗಳ ಫಲವಾಗಿ ಆರ್ಥಿಕ ವೃದ್ಧಿ ದರ ಹೆಚ್ಚಾಗಲಿದೆ ಎಂದು ತಿಳಿಸಿದೆ.

2017ರ ಆರಂಭದಲ್ಲಿ ನೋಟು ರದ್ದತಿಯಿಂದ ಆರ್ಥಿಕ ಬೆಳವಣಿಗೆ ಮೇಲೆ ಪ್ರತಿಕೂಲ ಪರಿಣಾಮ ಕಂಡುಬಂದಿತ್ತು. ಕ್ರಮೇಣ ಇದರ ಪ್ರಭಾವ ಕಡಿಮೆ ಆಗಲಿದೆ ಎಂದೂ ಹೇಳಿದೆ.

ADVERTISEMENT

ವಿಶ್ವ ಆರ್ಥಿಕ ಸ್ಥಿತಿಯ ಮುನ್ನೋಟ ವರದಿಯಲ್ಲಿ ಈ ಮಾಹಿತಿ ನೀಡಿದೆ. ಮೂಲಸೌಕರ್ಯ ವಲಯದಲ್ಲಿ ಸರ್ಕಾರಿ ಹೂಡಿಕೆ ಪ್ರಮಾಣ ಹೆಚ್ಚಾಗುತ್ತಿದೆ. ಇದು ಪ್ರಗತಿಗೆ ಪೂರಕವಾಗಲಿದೆ. ಹಣಕಾಸು ನೀತಿ ಬಗ್ಗೆ ಮಾತ್ರ ಸ್ಪಲ್ಪ ಮಟ್ಟಿನ ಅನಿಶ್ಚಿತ ಸ್ಥಿತಿ ಇದೆ ಎಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.