ಮುಂಬೈ: ಇಟಲಿಯ ಸ್ಫೋರ್ಟ್ಸ್ ಕಾರು ತಯಾರಿಕಾ ಸಂಸ್ಥೆ ಲ್ಯಾಂಬರ್ಗಿನಿ ಗುರುವಾರ ಭಾರತದಲ್ಲಿ ಎಸ್ಯುವಿ ಯೂರಸ್ ಬಿಡುಗಡೆ ಮಾಡಿದೆ. ಇದರ ಬೆಲೆ ₹3 ಕೋಟಿ.
ಬಿಡುಗಡೆಯಾಗಿರುವ ಹೊಸ ಮಾದರಿ ಎಸ್ಯುವಿ ಯೂರಸ್ ಮೂಲಕ ಭಾರತದಲ್ಲಿ ತನ್ನ ಮಾರುಕಟ್ಟೆ ವ್ಯಾಪ್ತಿ 2.5–3 ಪಟ್ಟು ಹೆಚ್ಚುವ ನಿರೀಕ್ಷೆ ಇರುವುದಾಗಿ ಲ್ಯಾಂಬರ್ಗಿನಿಯ ಏಷ್ಯಾ–ಪೆಸಿಫಿಕ್ ಪ್ರಧಾನ ವ್ಯವಸ್ಥಾಪಕ ಆ್ಯಂಡ್ರಿಯಾ ಹೇಳಿದರು.
₹3 ಕೋಟಿ ಬೆಲೆಯ ಯೂರಸ್ ಲ್ಯಾಂಬರ್ಗಿನಿಯ ಎಲ್ಎಂ002 ನಂತರ ಬಿಡುಗಡೆಯಾಗಿರುವ ಮೊದಲ ಎಸ್ಯುವಿ ಆಗಿದೆ. 2012ರ ಬೀಜಿಂಗ್ ಆಟೊಮೊಬೈಲ್ ಪ್ರದರ್ಶನದಲ್ಲಿ ಯೂರಸ್ ಪ್ರದರ್ಶನಗೊಂಡಿತ್ತು.
ಗರಿಷ್ಠ ವೇಗ: ಗಂಟೆಗೆ 305 ಕಿ.ಮೀ.
0–100 ಕಿ.ಮೀ ವೇಗ ಪಡೆಯಲು ಸಮಯ: 3.6 ಸೆಕೆಂಡ್
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.