ADVERTISEMENT

ಯುಲುನಲ್ಲಿ ಬಜಾಜ್‌ ಆಟೊ ಹೂಡಿಕೆ

ಪಿಟಿಐ
Published 26 ನವೆಂಬರ್ 2019, 20:11 IST
Last Updated 26 ನವೆಂಬರ್ 2019, 20:11 IST

ನವದೆಹಲಿ : ವಿದ್ಯುತ್‌ ಚಾಲಿತ ಬೈಕ್‌ ಬಾಡಿಗೆಗೆ ನೀಡುವ ನವೋದ್ಯಮ, ಬೆಂಗಳೂರಿನ ಯುಲುನಲ್ಲಿ ಬಜಾಜ್‌ ಆಟೊ ಕಂಪನಿಯು ₹ 57 ಕೋಟಿ ಹೂಡಿಕೆ ಮಾಡಿದೆ.

ಬಾಡಿಗೆ ನೀಡುವ ಉದ್ದೇಶದಿಂದಲೇ ವಿದ್ಯುತ್‌ ಚಾಲಿತ ಬೈಕ್‌ಗಳ ವಿನ್ಯಾಸ ಮತ್ತು ತಯಾರಿಕೆ ಮಾಡಲು ಎರಡೂ ಕಂಪನಿಗಳು ಒಪ್ಪಂದ ಮಾಡಿಕೊಂಡಿವೆ. ಈ ವಾಹನಗಳ ಮಾರಾಟಕ್ಕೆ ಅಗತ್ಯಾದ ಹಣಕಾಸಿನ ನೆರವನ್ನು ಬಜಾಜ್‌ ಆಟೊ ಪೂರೈಸಲಿದೆ.

ಕಂಪನಿಯು ಸದ್ಯ, ಬೆಂಗಳೂರು, ನವದೆಹಲಿ, ಪುಣೆ, ಗ್ರೇಟರ್‌ ಮುಂಬೈ ಮತ್ತು ಭುವನೇಶ್ವರದಲ್ಲಿ ಕಾರ್ಯಾಚರಿಸುತ್ತಿದೆ. 2020ರ ಡಿಸೆಂಬರ್‌ ಅಂತ್ಯಕ್ಕೆ ಇ–ಬೈಕ್‌ಗಳ ಸೇವೆಯನ್ನು 1 ಲಕ್ಷಕ್ಕೆ ಹೆಚ್ಚಿಸುವ ಗುರಿ ಹಾಕಿಕೊಂಡಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.