ADVERTISEMENT

ಬ್ಯಾರೀಸ್‌ ಗ್ರೂಪ್‌ಗೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2022, 16:27 IST
Last Updated 22 ಸೆಪ್ಟೆಂಬರ್ 2022, 16:27 IST
ಇಂಧನ ಸಚಿವಾಲಯದ ಬ್ಯೂರೊ ಆಫ್ ಎನರ್ಜಿ ಎಫಿಶಿಯೆನ್ಸಿ ಸಂಸ್ಥೆಯ ನಿರ್ದೇಶಕ ಡಾ. ಅಶೋಕ್ ಕುಮಾರ್ ಅವರು ಬ್ಯಾರೀಸ್‌ ಗ್ರೂಪ್ ಅಧ್ಯಕ್ಷ ಮಝರ್ ಬ್ಯಾರಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.
ಇಂಧನ ಸಚಿವಾಲಯದ ಬ್ಯೂರೊ ಆಫ್ ಎನರ್ಜಿ ಎಫಿಶಿಯೆನ್ಸಿ ಸಂಸ್ಥೆಯ ನಿರ್ದೇಶಕ ಡಾ. ಅಶೋಕ್ ಕುಮಾರ್ ಅವರು ಬ್ಯಾರೀಸ್‌ ಗ್ರೂಪ್ ಅಧ್ಯಕ್ಷ ಮಝರ್ ಬ್ಯಾರಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.   

ಬೆಂಗಳೂರು: ಬ್ಯಾರೀಸ್ ಗ್ರೂಪ್‌ಗೆ ಸೇರಿರುವ, ವೈಟ್‌ಫೀಲ್ಡ್‌ನಲ್ಲಿನ ಬ್ಯಾರೀಸ್ ಗ್ಲೋಬಲ್ ರಿಸರ್ಚ್ ಟ್ರಯಾಂಗಲ್‌ (ಬಿ.ಜಿ.ಆರ್‌.ಟಿ) 2021, 2022 ಹಾಗೂ 2023ನೇ ಸಾಲಿಗೆ ‘ಸಿಐಐ ಶ್ರೇಷ್ಠ ಇಂಧನ ನಿರ್ವಹಣೆಗಾಗಿ ರಾಷ್ಟ್ರೀಯ ಪ್ರಶಸ್ತಿ’ ಪಡೆದಿದೆ. ಅಲ್ಲದೆ, ‘ನ್ಯಾಷನಲ್ ಎನರ್ಜಿ ಲೀಡರ್’ ಗೌರವಕ್ಕೆ ಪಾತ್ರವಾಗಿದೆ.

‘ಬಿ.ಜಿ.ಆರ್‌.ಟಿ’ ಭಾರತದ ಮೊದಲ ಲೀಡ್ ಪ್ರಮಾಣೀಕೃತ ಸಂಶೋಧನಾ ಮತ್ತು ಅಭಿವೃದ್ಧಿ ಕೇಂದ್ರವಾಗಿದೆ. ಶ್ರೇಷ್ಠ ನಿರ್ಮಾಣಕ್ಕೆ ಮಾನದಂಡ ಎಂದು ಪರಿಗಣಿಸುವಂತಹ ಯೋಜನೆ ಇದು ಎಂದು ಉದ್ಯಮ ವಲಯ ಹಾಗೂ ತಜ್ಞರಿಂದ ಮನ್ನಣೆ ಪಡೆದಿದೆ ಎಂದು ಕಂಪನಿಯ ಪ್ರಕಟಣೆ ಹೇಳಿದೆ.

ನವದೆಹಲಿಯಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಸರ್ಕಾರದ ಇಂಧನ ಸಚಿವಾಲಯದ ಬ್ಯುರೋ ಆಫ್ ಎನರ್ಜಿ ಎಫಿಷಿಯನ್ಸಿಯ ನಿರ್ದೇಶಕ ಡಾ. ಅಶೋಕ್ ಕುಮಾರ್ ಅವರು ಬ್ಯಾರೀಸ್ ಗ್ರೂಪ್‌ನ ಕಾರ್ಯನಿರ್ವಾಹಕ ನಿರ್ದೇಶಕ ಮಝರ್ ಬ್ಯಾರಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.