ADVERTISEMENT

ಬಿಎಸ್‌ಎನ್‌ಎಲ್‌ ಮುಚ್ಚುವ ವರದಿ ನಿರಾಧಾರ: ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2019, 18:01 IST
Last Updated 11 ಅಕ್ಟೋಬರ್ 2019, 18:01 IST
ಬಿಎಸ್‌ಎನ್‌ಎಲ್‌
ಬಿಎಸ್‌ಎನ್‌ಎಲ್‌   

ಬೆಂಗಳೂರು: ಕೇಂದ್ರ ಸರ್ಕಾರಿ ಸ್ವಾಮ್ಯದ ದೂರಸಂಪರ್ಕ ಸೇವಾ ಸಂಸ್ಥೆ ಭಾರತ್‌ ಸಂಚಾರ್‌ ನಿಗಮ ನಿಯಮಿತವನ್ನು (ಬಿಎಸ್‌ಎನ್‌ಎಲ್‌) ಮುಚ್ಚಲಾಗುವುದು ಎನ್ನುವ ವರದಿಗಳಲ್ಲಿ ಸತ್ಯಾಂಶ ಇಲ್ಲ ಎಂದು ನಿಗಮವು ಸ್ಪಷ್ಟಪಡಿಸಿದೆ.

‘ಕೆಲ ಪಟ್ಟಭದ್ರ ಹಿತಾಸಕ್ತಿಗಳು ‘ಬಿಎಸ್‌ಎನ್‌ಎಲ್‌’ ಬಗ್ಗೆ ವೃಥಾ ವದಂತಿಗಳನ್ನು ಹರಡುತ್ತಿವೆ. ಅಂತಹ ಸುದ್ದಿಗಳಲ್ಲಿ ಯಾವುದೇ ಹುರುಳಿಲ್ಲ. ನಿಗಮವನ್ನು ಆರ್ಥಿಕವಾಗಿ ಪುನಶ್ಚೇತನಗೊಳಿಸುವುದು ಸರ್ಕಾರದ ತೀವ್ರ ಪರಿಶೀಲನೆಯಲ್ಲಿ ಇದೆ’ ಎಂದು ನಿಗಮದ ಕರ್ನಾಟಕ ವೃತ್ತದ ಚೀಫ್‌ ಜನರಲ್ ಮ್ಯಾನೇಜರ್‌ ಸುಶಿಲ್‌ ಕುಮಾರ್‌ ಮಿಶ್ರಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ದೇಶದಾದ್ಯಂತ ದೂರಸಂಪರ್ಕದ ಎಲ್ಲ ವೃತ್ತಗಳಲ್ಲಿ ಮತ್ತು ದೂರದ ಸ್ಥಳಗಳಲ್ಲಿ ನಿಗಮವು ಮೊಬೈಲ್‌ ಸೇವೆ ಒದಗಿಸುತ್ತಿದೆ. ನೈಸರ್ಗಿಕ ವಿಪತ್ತುಗಳ ಸಂದರ್ಭದಲ್ಲಿಯೂ ನಿಗಮವು ಗ್ರಾಹಕರ ಸಂಕಷ್ಟಕ್ಕೆ ಸ್ಪಂದಿಸುತ್ತಿದೆ’ ಎಂದು ಅವರು ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.