ADVERTISEMENT

ಆದಾಯ ತೆರಿಗೆ ರಿಟರ್ನ್ಸ್‌ ಅಧಿಸೂಚನೆ ಪ್ರಕಟ

​ಪ್ರಜಾವಾಣಿ ವಾರ್ತೆ
Published 5 ಜನವರಿ 2020, 20:22 IST
Last Updated 5 ಜನವರಿ 2020, 20:22 IST
ಆದಾಯ ತೆರಿಗೆ
ಆದಾಯ ತೆರಿಗೆ   

ನವದೆಹಲಿ : 2020-21ನೇ ಅಂದಾಜು ವರ್ಷಕ್ಕೆ ಆದಾಯ ತೆರಿಗೆ ಲೆಕ್ಕಪತ್ರ ಸಲ್ಲಿಸುವುದಕ್ಕೆ ನೆರವಾಗಲು ನೇರ ತೆರಿಗೆ ಕೇಂದ್ರೀಯ ಮಂಡಳಿಯು (ಸಿಬಿಡಿಟಿ) ಐಟಿ ರಿಟರ್ನ್ಸ್‌ ಅರ್ಜಿ ನಮೂನೆ ಅಧಿಸೂಚನೆ ಹೊರಡಿಸಿದೆ.

ವೈಯಕ್ತಿಕ ಆದಾಯದವರು ಬಳಸುವ ‘ಐಟಿಆರ್‌–1’ (ಸಹಜ್‌) ಮತ್ತು ಹಿಂದೂ ಅವಿಭಕ್ತ ಕುಟುಂಬಗಳು ಮತ್ತು ಕಂಪನಿಗಳು ಬಳಸುವ ‘ಐಟಿಆರ್‌–4’ (ಸುಗಮ್‌) ಅರ್ಜಿ ನಮೂನೆಗಳನ್ನು ಪ್ರಕಟಿಸಲಾಗಿದೆ.

ಐಟಿಆರ್‌ ಫಾರ್ಮ್ಸ್‌ಗಳಲ್ಲಿ ಎರಡು ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದೆ. ವೈಯಕ್ತಿಕ ಆದಾಯದವರು ಮನೆ ಆಸ್ತಿಯಲ್ಲಿ ಜಂಟಿ ಮಾಲೀಕರಾಗಿದ್ದರೆ ಅವರು ಐಟಿಆರ್‌–1 ಅಥವಾ ಐಟಿಆರ್‌–4 ಸಲ್ಲಿಸುವಂತಿಲ್ಲ. ಬ್ಯಾಂಕ್‌ನಲ್ಲಿ ₹ 1 ಕೋಟಿಗಿಂತ ಹೆಚ್ಚು ಮೊತ್ತ ಠೇವಣಿ ಇರಿಸಿದವರು ಮತ್ತು ವಿದೇಶ ಪ್ರವಾಸಕ್ಕೆ ₹ 2 ಲಕ್ಷ ವೆಚ್ಚ ಮಾಡಿದವರು ಇಲ್ಲವೆ ₹ 1 ಲಕ್ಷದಷ್ಟು ವಿದ್ಯುತ್‌ ಬಿಲ್‌ ಪಾವತಿಸಿದವರಿಗೆ ಐಟಿಆರ್‌–1 ಅನ್ವಯವಾಗುವುದಿಲ್ಲ. ಪಾಸ್‌ಫೊರ್ಟ್‌ ಹೊಂದಿದವರು ‘ಐಟಿಆರ್‌–1’ರಲ್ಲಿ ಸಂಖ್ಯೆ ನಮೂದಿಸಬೇಕು.

ADVERTISEMENT

ಈ ಹಿಂದೆ ಏಪ್ರಿಲ್‌ನಲ್ಲಿ ಪ್ರಕಟಿಸುತ್ತಿದ್ದ ರಿಟರ್ನ್ಸ್‌ ಫಾರ್ಮ್ಸ್‌ಗಳ ಬಗ್ಗೆ ಈಗ ಜನವರಿಯಲ್ಲಿಯೇ ಅಧಿಸೂಚನೆ ಹೊರಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.