ADVERTISEMENT

ಕಾನೂನು ಉಲ್ಲಂಘಿಸಿದ ಆರೋ‍ಪ: ಜೆನ್ಸೋಲ್‌ ಕಂಪನಿ ವಿರುದ್ಧ ತನಿಖೆ

ಪಿಟಿಐ
Published 20 ಮೇ 2025, 14:36 IST
Last Updated 20 ಮೇ 2025, 14:36 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

‌ನವದೆಹಲಿ: ಕಂಪನಿ ಕಾನೂನು ಉಲ್ಲಂಘಿಸಿದ ಆರೋ‍ಪ ಎದುರಿಸುತ್ತಿರುವ ಜೆನ್ಸೋಲ್‌ ಎಂಜಿನಿಯರಿಂಗ್ ಲಿಮಿಟೆಡ್‌ ಹಾಗೂ ಇತರೆ 18 ಕಂಪನಿಗಳ ವಿರುದ್ಧದ ತನಿಖೆಯನ್ನು ಮುಂದಿನ ಮೂರು ಅಥವಾ ಐದು ತಿಂಗಳೊಳಗೆ ಪೂರ್ಣಗೊಳಿಸಲಾಗುವುದು ಎಂದು ರಾಷ್ಟ್ರೀಯ ಹಣಕಾಸು ವರದಿ ಪ್ರಾಧಿಕಾರದ ಮುಖ್ಯಸ್ಥರಾದ ರವನೀತ್ ಕೌರ್ ತಿಳಿಸಿದ್ದಾರೆ.

ಆ್ಯಪ್‌ ಆಧರಿತ ಟ್ಯಾಕ್ಸಿ ಸೇವೆ ಒದಗಿಸುವ ಬ್ಲೂಸ್ಮಾರ್ಟ್‌ ಕಂಪನಿಯ ಒಡೆತನಕ್ಕೆ ಸೇರಿದ ಜೆನ್ಸೋಲ್ ಕಂಪನಿಯ ಪ್ರವರ್ತಕರಾದ ಅನ್ಮೋಲ್‌ ಸಿಂಗ್‌ ಜಗ್ಗಿ ಮತ್ತು ಪುನೀತ್‌ ಸಿಂಗ್ ಜಗ್ಗಿ ಅವರು, ಕಂಪನಿಯ ಹಣವನ್ನು ದುರ್ಬಳಕೆ ಮಾಡಿಕೊಂಡ ಆರೋಪ ಹೊತ್ತಿದ್ದಾರೆ. ಈ ಕಂಪನಿ ವಿರುದ್ಧ ಈಗಾಗಲೇ ಪ್ರಾಧಿಕಾರವು ಪ್ರಾಥಮಿಕ ವಿಚಾರಣೆಯನ್ನು ಆರಂಭಿಸಿದೆ ಎಂದು ತಿಳಿಸಿದ್ದಾರೆ.

ಹಣ ದುರ್ಬಳಕೆ ಮತ್ತು ಸರ್ಕಾರಕ್ಕೆ ನಷ್ಟ ಉಂಟು ಮಾಡಿರುವ ಸಂಬಂಧ ಜೆನ್ಸೋಲ್ ಕಂಪನಿಯ ಪ್ರವರ್ತಕರನ್ನು ಷೇರುಪೇಟೆ ವಹಿವಾಟಿನಿಂದಲೂ ನಿಷೇಧಿಸಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.