ADVERTISEMENT

ಸೈಬರ್‌ ದಾಳಿ ಪರಿಣಾಮ ಬೀರದು: ವಿಪ್ರೊ

ಪಿಟಿಐ
Published 19 ಏಪ್ರಿಲ್ 2019, 17:39 IST
Last Updated 19 ಏಪ್ರಿಲ್ 2019, 17:39 IST
ವಿಪ್ರೊ
ವಿಪ್ರೊ   

ನವದೆಹಲಿ: ತನ್ನ ಕೆಲವು ಉದ್ಯೋಗಿಗಳ ಖಾತೆಗಳ ಮೇಲೆ ನಡೆದಿರುವ ಸೈಬರ್‌ ದಾಳಿಯಿಂದ ಸಂಸ್ಥೆಯ ಸೂಕ್ಷ್ಮ ವಹಿವಾಟಿನ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಿಲ್ಲ ಎಂದು ಐ.ಟಿ ದೈತ್ಯ ಸಂಸ್ಥೆ ವಿಪ್ರೊ ತಿಳಿಸಿದೆ.

10 ದಿನಗಳ ಹಿಂದೆ ತನ್ನ ಕೆಲ ಸಿಬ್ಬಂದಿಯ ಖಾತೆಯಲ್ಲಿ ಅಸಾಮಾನ್ಯ ಚಟುವಟಿಕೆ ಕಂಡು ಬಂದಿರುವುದು ಗಮನಕ್ಕೆ ಬಂದಿತ್ತು. ವೈಯಕ್ತಿಕ ಮಾಹಿತಿ ಕದಿಯುವ ಇ–ಮೇಲ್‌ ಸಂಚಿನ ಸುಳಿವು ಸಿಗುತ್ತಿದ್ದಂತೆ ಅದನ್ನು ವಿಫಲಗೊಳಿಸುವ ಕಾರ್ಯತಂತ್ರವನ್ನು ತಕ್ಷಣಕ್ಕೆ ಅಳವಡಿಸಿಕೊಳ್ಳಲಾಗಿತ್ತು.

ಈ ಬಗ್ಗೆ ತನಿಖೆ ನಡೆಸಿ ದಾಳಿಗೆ ಒಳಗಾದ ಸಿಬ್ಬಂದಿಯ ಖಾತೆಗಳನ್ನು ಗುರುತಿಸಿ ಪ್ರತ್ಯೇಕಿಸಲಾಯಿತು. ದಾಳಿಯ ತೀವ್ರತೆ ತಗ್ಗಿಸಲು ಆದ್ಯತೆ ಮೇರೆಗೆ ಪರಿಹಾರ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಈ ಘಟನೆಯು ಸಂಸ್ಥೆಯ ವಹಿವಾಟಿನ ಮೇಲೆ ಯಾವುದೇ ವ್ಯತಿರಿಕ್ತ ಪರಿಣಾಮ ಬೀರಿಲ್ಲ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ.

ADVERTISEMENT

ವಿಪ್ರೊದ ಕಂಪ್ಯೂಟರ್‌ ಸಿಸ್ಟಮ್‌ ಅನ್ನು ಸೈಬರ್‌ ದಾಳಿಕೋರರು ಭೇದಿಸಿದ್ದು, ಅದರ ಕೆಲ ಗ್ರಾಹಕರ ವಿರುದ್ಧ ದಾಳಿ ನಡೆಸಲು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಸೈಬರ್‌ ಸುರಕ್ಷತೆಗೆ ಸಂಬಂಧಿಸಿದ ಬ್ಲಾಗ್‌ ಕ್ರೆಬ್ಸ್‌ಆನ್‌ಸೆಕ್ಯುರಿಟಿ ಹೇಳಿಕೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.