ADVERTISEMENT

ರಫ್ತು ವಹಿವಾಟು ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2019, 17:36 IST
Last Updated 16 ಫೆಬ್ರುವರಿ 2019, 17:36 IST

ನವದೆಹಲಿ: ದೇಶದ ರಫ್ತು ವಹಿವಾಟು ಜನವರಿಯಲ್ಲಿ ಶೇ 3.74ರಷ್ಟು ಅಲ್ಪ ಪ್ರಗತಿ ಕಂಡಿದೆ ಎಂದು ಕೇಂದ್ರ ವಾಣಿಜ್ಯ ಸಚಿವಾಲಯ ಮಾಹಿತಿ ನೀಡಿದೆ.

ಮೌಲ್ಯದ ಲೆಕ್ಕದಲ್ಲಿ ₹ 1.80 ಲಕ್ಷ ಕೋಟಿಯಿಂದ ₹ 1.87 ಲಕ್ಷ ಕೋಟಿಗೆ ಏರಿಕೆಯಾಗಿದೆ.

ಎಂಜಿನಿಯರಿಂಗ್‌, ಚರ್ಮ, ಹರಳು ಮತ್ತು ಚಿನ್ನಾಭರಣ ವಲಯಗಳ ಬೆಳವಣಿಗೆ ಮಂದಗತಿಯಲ್ಲಿದೆ ಹೀಗಾಗಿ ಅಲ್ಪ ಮಟ್ಟಿನ ಪ್ರಗತಿ ಸಾಧ್ಯವಾಗಿದೆ ಎಂದು ತಿಳಿಸಿದೆ.

ADVERTISEMENT

ಆಮದು ವಹಿವಾಟು: ಆಮದು ವಹಿವಾಟು ₹ 2.91 ಲಕ್ಷ ಕೋಟಿಗಳಷ್ಟಾಗಿದೆ.

ಚಿನ್ನದ ಆಮದು ಶೇ 38.16 ರಷ್ಟು ಹೆಚ್ಚಾಗಿದ್ದು, ₹ 11,857 ಕೋಟಿಯಿಂದ ₹ 16,401 ಕೋಟಿಗೆ ಏರಿಕೆಯಾಗಿದೆ.ತೈಲ ಆಮದು ಶೇ 3.59ರಷ್ಟು ಹೆಚ್ಚಾಗಿದ್ದು, ₹ 79,804 ಕೋಟಿಗೆ ತಲುಪಿದೆ.

ವ್ಯಾಪಾರ ಕೊರತೆ ಅಂತರ 2018ರ ಜನವರಿಯಲ್ಲಿದ್ದ ₹ 1.11 ಲಕ್ಷ ಕೋಟಿಯಿಂದ 2019ರ ಜನವರಿಯಲ್ಲಿ ₹ 1.04 ಲಕ್ಷ ಕೋಟಿಗೆ ಇಳಿಕೆಯಾಗಿದೆ.

‘ಜಾಗತಿಕ ಮಾರುಕಟ್ಟೆಯಲ್ಲಿನ ಪ್ರತಿಕೂಲ ಪರಿಸ್ಥಿತಿ ಮತ್ತು ದೇಶದಲ್ಲಿ ಕೆಲವು ವಲಯಗಳ ಮಂದಗತಿಯ ಬೆಳವಣಿಗೆಯಿಂದ ರಫ್ತು ವಹಿವಾಟು ಅಲ್ಪ ಪ್ರಗತಿ ಕಾಣುವಂತಾಗಿದೆ’ ಎಂದು ಭಾರತೀಯ ರಫ್ತುದಾರರ ಸಂಘಟನೆಗಳ ಒಕ್ಕೂಟದ (ಎಫ್‌ಐಇಒ) ಅಧ್ಯಕ್ಷ ಗಣೇಶ್‌ ಕುಮಾರ್‌ ಗುಪ್ತಾ ತಿಳಿಸಿದ್ದಾರೆ.

‘ಜಾಗತಿಕ ವ್ಯಾಪಾರ ಇಳಿಮುಖ ವಾಗಿದೆ. ಚೀನಾ ಮತ್ತು ಆಗ್ನೇಯ ಏಷ್ಯಾ ರಾಷ್ಟ್ರಗಳನ್ನೂ ಒಳಗೊಂಡು ಜಾಗತಿಕ ಆರ್ಥಿಕ ಪ್ರಗತಿ ಮಂದಗತಿಯಲ್ಲಿ ಸಾಗುತ್ತಿದೆ. ಈ ಅಂಶಗಳು ತಯಾರಿಕಾ ವಲಯದ ಮೇಲೆ ಪರಿಣಾಮ ಬೀರುತ್ತಿವೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.