ADVERTISEMENT

ಹಬ್ಬದ ಮಾರಾಟ ಫ್ಲಿಪ್‌ಕಾರ್ಟ್‌ ಮೇಲುಗೈ: ರೆಡ್‌ಸೀರ್‌ ಕನ್ಸಲ್ಟಿಂಗ್‌

ಪಿಟಿಐ
Published 19 ಅಕ್ಟೋಬರ್ 2018, 17:18 IST
Last Updated 19 ಅಕ್ಟೋಬರ್ 2018, 17:18 IST
bbb
bbb   

ನವದೆಹಲಿ: ಐದು ದಿನಗಳ ಹಬ್ಬದ ಮಾರಾಟದಲ್ಲಿ ಫ್ಲಿಪ್‌ಕಾರ್ಟ್‌ ಕಂಪನಿಯು ಶೇ 50ಕ್ಕೂ ಹೆಚ್ಚಿನ ಪಾಲನ್ನು ಹೊಂದಿದೆ ಎಂದು ರೆಡ್‌ಸೀರ್‌ ಕನ್ಸಲ್ಟಿಂಗ್‌ ಸಂಸ್ಥೆ ಹೇಳಿದೆ.

ಸ್ಮಾರ್ಟ್‌ಫೋನ್‌ ಮತ್ತು ಫ್ಯಾಷನ್‌ ಮಾರಾಟದಲ್ಲಿ ಹೆಚ್ಚಳವಾಗಿರುವುದರಿಂದ ಫ್ಲಿಪ್‌ಕಾರ್ಟ್ ಅತಿ ಹೆಚ್ಚಿನ ಮಾರಾಟದ ಪಾಲು ತನ್ನದಾಗಿಸಿಕೊಂಡಿದೆ ಎಂದು ತಿಳಿಸಿದೆ.

ಫ್ಲಿಪ್‌ಕಾರ್ಟ್‌ ಮತ್ತು ಅಮೆಜಾನ್‌ ಮಧ್ಯೆಅತಿ ಹೆಚ್ಚು ಪೈಪೋಟಿ ಇತ್ತು. ಅದರಲ್ಲಿ ಫ್ಲಿಪ್‌ಕಾರ್ಟ್‌ ಶೇ 62ರಷ್ಟು ಮಾರಾಟದ ಪಾಲು ಹೊಂದಿದ್ದರೆ, ಅಮೆಜಾನ್‌ ಪಾಲು ಶೇ 38ರಷ್ಟಿದೆ.

ADVERTISEMENT

ಈ ವರದಿಯನ್ನು ಅಮೆಜಾನ್‌ ವಕ್ತಾರರೊಬ್ಬರು ತಳ್ಳಿಹಾಕಿದ್ದಾರೆ.ಗ್ರೇಟ್‌ ಇಂಡಿಯನ್‌ ಫೆಸ್ಟಿವಲ್‌ಗೆ ಗ್ರಾಹಕರಿಂದ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.