ADVERTISEMENT

ಎಫ್‌ಪಿಐ: ₹ 38,211 ಕೋಟಿ ಹೂಡಿಕೆ

ಪಿಟಿಐ
Published 24 ಮಾರ್ಚ್ 2019, 18:08 IST
Last Updated 24 ಮಾರ್ಚ್ 2019, 18:08 IST
   

ನವದೆಹಲಿ: ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಪಿಐ) ಮಾರ್ಚ್‌ ತಿಂಗಳಿನಲ್ಲಿ ಇದುವರೆಗೆ ಬಂಡವಾಳ ಮಾರುಕಟ್ಟೆಯಲ್ಲಿ ₹ 38,211 ಕೋಟಿ ಹೂಡಿಕೆ ಮಾಡಿದ್ದಾರೆ.

ಫೆಬ್ರುವರಿಯಲ್ಲಿ ₹ 11,182 ಕೋಟಿ ಹೂಡಿಕೆ ಮಾಡಿದ್ದರು.ವಿವಿಧ ದೇಶಗಳ ಕೇಂದ್ರೀಯ ಬ್ಯಾಂಕ್‌ಗಳು ತಮ್ಮ ಹಣಕಾಸು ನೀತಿ ಮುನ್ನೋಟದಲ್ಲಿ ಬದಲಾವಣೆ ಮಾಡಿಕೊಳ್ಳಲು ಮುಂದಾಗಿವೆ. ಇದರಿಂದ ‘ಎಫ್‌ಪಿಐ’ ಹೂಡಿಕೆ ಹೆಚ್ಚಾಗುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

‘ಅಮೆರಿಕದ ಫೆಡರಲ್‌ ರಿಸರ್ವ್, ಬಡ್ಡಿದರ ಏರಿಕೆ ನಿರ್ಧಾರವನ್ನು ಸದ್ಯಕ್ಕೆ ಕೈಬಿಟ್ಟಿದೆ. ಇನ್ನು ಅಮೆರಿಕ ಮತ್ತು ಚೀನಾ ಮಧ್ಯೆ ಮೂಡಿದ್ದ ವಾಣಿಜ್ಯ ಬಿಕ್ಕಟ್ಟು ಕಡಿಮೆಯಾಗುತ್ತಿದೆ. ಈ ಬೆಳವಣಿಗೆಗಳು ಭಾರತದ ಮಾರುಕಟ್ಟೆಯು ‘ಎಫ್‌ಪಿಐ’ ಆಕರ್ಷಿಸುವಂತೆ ಮಾಡುತ್ತಿವೆ’ ಎಂದು ಗ್ರೋವ್‌ ಸಂಸ್ಥೆಯ ಸಿಒಒ ಹರ್ಷ್‌ ಜೈನ್‌ ಅಭಿಪ್ರಾಯಪಟ್ಟಿದ್ದಾರೆ.

ADVERTISEMENT

‘ವರ್ಷದ ಆರಂಭದಲ್ಲಿ ಷೇರುಗಳ ಮಾರಾಟಕ್ಕೆ ಗಮನ ನೀಡಿದ್ದ ವಿದೇಶಿ ಹೂಡಿಕೆದಾರರು, ಇದೀಗ ಮತ್ತೆ ಹೂಡಿಕೆಗೆ ಆಸಕ್ತರಾಗಿದ್ದಾರೆ’ ಎಂದು ಮಾರ್ನಿಂಗ್‌ಸ್ಟಾರ್‌ ಇನ್‌ವೆಸ್ಟ್‌ಮೆಂಟ್‌ ಅಡ್ವೈಸರ್ ಇಂಡಿಯಾದ ಹಿರಿಯ ವ್ಯವಸ್ಥಾಪಕ ವಿಶ್ಲೇಷಕ ಹಿಮಾಂಶು ಶ್ರೀವಾಸ್ತವ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.