ADVERTISEMENT

ರೇಮಂಡ್ಸ್‌: ಗೌತಮ್‌ ಪದತ್ಯಾಗ

ಪಿಟಿಐ
Published 14 ನವೆಂಬರ್ 2018, 17:16 IST
Last Updated 14 ನವೆಂಬರ್ 2018, 17:16 IST
ಗೌತಮ್‌
ಗೌತಮ್‌   

ಮುಂಬೈ: ರೇಮಂಡ್‌ ಅಪೆರಲ್ ಲಿಮಿಟೆಡ್‌ನ ಅಧ್ಯಕ್ಷ ಹುದ್ದೆಗೆ ಗೌತಮ್ ಸಿಂಘಾನಿಯಾ ಅವರು ರಾಜೀನಾಮೆ ಸಲ್ಲಿಸಿದ್ದಾರೆ.

ಸಂಸ್ಥೆಯನ್ನು ಹೆಚ್ಚು ವೃತ್ತಿಪರತೆಯಿಂದ ನಿರ್ವಹಿಸುವ ಉದ್ದೇಶದಿಂದ ನಿರ್ವಿಕ್‌ ಸಿಂಗ್‌ (27) ಅವರನ್ನು ಸಂಸ್ಥೆಯ ಕಾರ್ಯನಿರ್ವಾಹಕಯೇತರ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.

ಗೌತಮ್‌ ಅವರು ನಿರ್ದೇಶಕ ಮಂಡಳಿಯ ಸದಸ್ಯರಾಗಿ ಮುಂದುವರೆಯಲಿದ್ದಾರೆ. ಅನ್ಶು ಸರಿನ್‌ ಮತ್ತು ಗೌತಮ್‌ ತ್ರಿವೇದಿ ಅವರನ್ನು ಮಂಡಳಿಯ ನಿರ್ದೇಶಕರನ್ನಾಗಿ ನೇಮಿಸಲಾಗಿದೆ.

ADVERTISEMENT

ಗೌತಮ್‌ ಅವರ ತಂದೆ ವಿಜಯಪತ್‌ ಸಿಂಘಾನಿಯಾ ಅವರನ್ನು ಇತ್ತೀಚೆಗೆ ರೇಮಂಡ್‌ ಸಮೂಹದ ಗೌರವ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.