ADVERTISEMENT

ಗೋಧಿ ಉತ್ಪಾದನೆ ಶೇ 3ರಷ್ಟು ಇಳಿಕೆ ಸಾಧ್ಯತೆ

ಪಿಟಿಐ
Published 19 ಮೇ 2022, 15:59 IST
Last Updated 19 ಮೇ 2022, 15:59 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಗೋಧಿ ಉತ್ಪಾದನೆಯು 2020–21ನೇ ಬೆಳೆ ವರ್ಷಕ್ಕೆ ಹೋಲಿಸಿದರೆ 2021–22ನೇ ಬೆಳೆ ವರ್ಷದಲ್ಲಿ ಶೇಕಡ 3ರಷ್ಟು ಇಳಿಕೆಯಾಗುವ ಅಂದಾಜು ಮಾಡಲಾಗಿದೆ.

2020–21ನೇ ಬೆಳೆ ವರ್ಷದಲ್ಲಿ 10.95 ಕೋಟಿ ಟನ್‌ ಗೋಧಿ ಉತ್ಪಾದನೆ ಆಗಿತ್ತು. 2021–22ನೇ ಬೆಳೆ ವರ್ಷದಲ್ಲಿ 10.54 ಕೋಟಿ ಟನ್‌ಗೆ ಇಳಿಕೆ ಆಗಲಿದೆ ಎಂದು ಕೇಂದ್ರ ಕೃಷಿ ಸಚಿವಾಲಯ ಗುರುವಾರ ಹೇಳಿದೆ.

ಪಂಜಾಬ್‌ ಮತ್ತು ಹರಿಯಾಣದಲ್ಲಿ ಬಿಸಿ ಗಾಳಿಯಿಂದಾಗಿ ಇಳುವರಿ ಕಡಿಮೆ ಆಗಿದೆ. ಹೀಗಾಗಿ ಒಟ್ಟಾರೆ ಉತ್ಪಾದನೆ ಕಡಿಮೆ ಆಗಲಿದೆ ಎಂದು ಕೃಷಿ ಕಾರ್ಯದರ್ಶಿ ಮನೋಜ್‌ ಅಹುಜಾ ಕಳೆದ ವಾರ ಹೇಳಿದ್ದರು. ಉತ್ಪಾದನೆಯು 10.5 ಕೋಟಿ ಟನ್‌ನಿಂದ 10.60 ಕೋಟಿ ಟನ್‌ ಆಗಬಹುದು ಎಂದೂ ಹೇಳಿದ್ದರು.

ADVERTISEMENT

ಅಕ್ಕಿ ಉತ್ಪಾದನೆಯು 12.4 ಕೋಟಿ ಟನ್‌ನಿಂದ 12.96 ಕೋಟಿ ಟನ್‌ಗೆ ಏರಿಕೆ ಆಗುವ ಅಂದಾಜು ಮಾಡಲಾಗಿದೆ. ಬೇಳೆಕಾಳು ಉತ್ಪಾದನೆ 2.54 ಕೋಟಿ ಟನ್‌ನಿಂದ 2.77 ಕೋಟಿ ಟನ್‌ಗೆ ಏರಿಕೆ ಆಗಲಿದೆ. ಏಕದಳ ಧಾನ್ಯ ಉತ್ಪಾದನೆ 5.13 ಕೋಟಿ ಟನ್‌ನಿಂದ 5.07 ಟನ್‌ಗೆ ಇಳಿಕೆ ಆಗಲಿದೆ ಎಂದು ಸಚಿವಾಲಯವು ಪರಿಷ್ಕೃತ ಅಂದಾಜಿನಲ್ಲಿ ಹೇಳಿದೆ.

ಎಣ್ಣೆಕಾಳುಗಳ ಉತ್ಪಾದನೆಯು 3.59 ಕೋಟಿ ಟನ್‌ನಿಂದ ದಾಖಲೆಯ 3.84 ಕೋಟಿ ಟನ್‌ಗೆ ಏರಿಕೆ ಆಗಲಿದೆ. ಒಟ್ಟಾರೆ ಆಹಾರ ಧಾನ್ಯಗಳ ಉತ್ಪಾದನೆಯು 31.07 ಕೋಟಿ ಟನ್‌ನಿಂದ 31.45 ಕೋಟಿ ಟನ್‌ಗೆ ಏರಿಕೆ ಆಗುವ ಎಂದು ಅಂದಾಜು ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.