ADVERTISEMENT

ವಿದ್ಯುನ್ಮಾನ ಮೌಲ್ಯಮಾಪನ: ಕುಂದುಕೊರತೆ ನೋಂದಣಿಗೆ 3 ಇ-ಮೇಲ್

ಪಿಟಿಐ
Published 7 ಆಗಸ್ಟ್ 2021, 11:24 IST
Last Updated 7 ಆಗಸ್ಟ್ 2021, 11:24 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ವಿದ್ಯುನ್ಮಾನ ಮೌಲ್ಯಮಾಪನ (ಇ-ಅಸೆಸ್ಮೆಂಟ್) ಯೋಜನೆಯಡಿ ತೆರಿಗೆದಾರರು ಕುಂದುಕೊರತೆಗಳನ್ನು ನೋಂದಾಯಿಸಲು ಅನುಕೂಲ ಆಗುವಂತೆ ಆದಾಯ ತೆರಿಗೆ ಇಲಾಖೆಯು ಮೂರು ಅಧಿಕೃತ ಇ-ಮೇಲ್ ವಿಳಾಸಗಳನ್ನು ನೀಡಿದೆ. ಈ ಸಂಬಂಧ ಇಲಾಖೆಯು ಶನಿವಾರ ಅಧಿಸೂಚನೆ ಹೊರಡಿಸಿದೆ.

ತೆರಿಗೆದಾರರಿಗೆ ನೀಡುವ ಸೇವೆಗಳನ್ನು ಮತ್ತಷ್ಟು ಸುಧಾರಿಸುವ ಉದ್ದೇಶದಿಂದ, ಆದಾಯ ತೆರಿಗೆ ಇಲಾಖೆಯು ಬಾಕಿ ಇರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ದೂರುಗಳನ್ನು ದಾಖಲಿಸಲು ಮೂರು ಇ-ಮೇಲ್ ಐಡಿಗಳನ್ನು ರೂಪಿಸಿದೆ ಎಂದು ಇಲಾಖೆಯು ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ತಿಳಿಸಿದೆ.

ತೆರಿಗೆದಾರರು ಅಧಿಕಾರಿಗಳನ್ನು ಮುಖತಃ ಭೇಟಿಯಾಗುವುದನ್ನು ತಪ್ಪಿಸಿ, ಮಾನವನ ಹಸ್ತಕ್ಷೇಪ ಇಲ್ಲದೆ ಮೌಲ್ಯಮಾಪನ ಮಾಡಲು ‘ಇ-ಅಸೆಸ್ಮೆಂಟ್’ ಈ ಯೋಜನೆ ರೂಪಿಸಲಾಗಿದೆ.
ಮೂರು ಇ-ಮೇಲ್ ವಿಳಾಸಗಳು:
ಮೌಲ್ಯಮಾಪನಕ್ಕಾಗಿ samadhan.faceless.assessment@incometax.gov.in
ದಂಡಕ್ಕೆ ಸಂಬಂಧಿಸಿದಂತೆ samadhan.faceless.penalt@incometax.gov.in
ಮನವಿ ಸಲ್ಲಿಸಲು samadhan.faceles.appeal@incometax.gov.in

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.