ADVERTISEMENT

ಕ್ಲಾಸ್‌ ಐ.ಟಿ ಅಭಿವೃದ್ಧಿ ಕೇಂದ್ರ ಆರಂಭ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2019, 19:41 IST
Last Updated 11 ನವೆಂಬರ್ 2019, 19:41 IST

ಬೆಂಗಳೂರು: ಎಂಜಿನಿಯರಿಂಗ್ ಮತ್ತು ಮಾಹಿತಿ ತಂತ್ರಜ್ಞಾನ ಸೇವೆ ಒದಗಿಸುವ ಕ್ಲಾಸ್ ಐಟಿ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್, 200 ತಂತ್ರಜ್ಞರು ಕೆಲಸ ಮಾಡುವ ತನ್ನ ಹೊಸ ಅಭಿವೃದ್ಧಿ ಕೇಂದ್ರವನ್ನು ಬೆಂಗಳೂರಿನಲ್ಲಿ ಆರಂಭಿಸಿದೆ.

ಏವಿಯಾನಿಕ್ಸ್, ಆಟೊಮೋಟಿವ್, ಬಿಎಫ್‌ಎಸ್ಐ, ಅರೋಗ್ಯ ಸೇವೆ, ಎಂಜಿನಿಯರಿಂಗ್ ಮತ್ತು ಆಟೋಮೇಷನ್ ನಂತಹ ಉದ್ಯಮ ಕ್ಷೇತ್ರದ 500 ವಿವಿಧ ಕಂಪನಿಗಳಿಗೆ ಸಂಸ್ಥೆಯು ಸೇವೆ ಒದಗಿಸುತ್ತಿದೆ. ಸದ್ಯಕ್ಕೆ 1,300 ಉದ್ಯೋಗಿಗಳನ್ನು ಹೊಂದಿರುವ ಕಂಪನಿಯು ಮುಂದಿನ ಎರಡು ವರ್ಷಗಳಲ್ಲಿ ಉದ್ಯೋಗಿಗಳ ಸಂಖ್ಯೆಯನ್ನು ದ್ವಿಗುಣಗೊಳಿಸುವ ಯೋಜನೆ ಹಾಕಿಕೊಂಡಿದೆ.

ರೂಪಾಯಿ ಕುಸಿತ
ಮುಂಬೈ (ಪಿಟಿಐ):
ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್‌ ಎದುರು ರೂಪಾಯಿ ಬೆಲೆಯು ಸೋಮವಾರ 19 ಪೈಸೆ ಕಡಿಮೆಯಾಗಿ ₹ 71.47ಕ್ಕೆ ಇಳಿದಿದೆ. ಇದು ಒಂದು ತಿಂಗಳ ಹಿಂದಿನ ಕನಿಷ್ಠ ಮಟ್ಟವಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.