ADVERTISEMENT

ಎಂಎಫ್‌ ನಿರ್ವಹಣಾ ಸಂಪತ್ತು ₹ 29.71 ಲಕ್ಷ ಕೋಟಿ

ಪಿಟಿಐ
Published 5 ಜನವರಿ 2021, 14:25 IST
Last Updated 5 ಜನವರಿ 2021, 14:25 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಮ್ಯೂಚುವಲ್‌ ಫಂಡ್‌ ಸಂಸ್ಥೆಗಳ ನಿರ್ವಹಣಾ ಸಂಪತ್ತು ಮೌಲ್ಯ ಡಿಸೆಂಬರ್‌ ತ್ರೈಮಾಸಿಕದ ಅಂತ್ಯಕ್ಕೆ ಶೇಕಡ 7.6ರಷ್ಟು ಹೆಚ್ಚಾಗಿದ್ದು ₹ 29.71 ಲಕ್ಷ ಕೋಟಿಗಳಿಗೆ ಏರಿಕೆಯಾಗಿದೆ.

ಮ್ಯೂಚುವಲ್‌ ಫಂಡ್‌ ಉದ್ಯಮದಲ್ಲಿ ಇರುವ 45 ಸಂಸ್ಥೆಗಳ ನಿರ್ವಹಣಾ ಸಂಪತ್ತು ಜುಲೈ–ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ₹ 27.6 ಲಕ್ಷ ಕೋಟಿಗಳಷ್ಟಿತ್ತು ಎಂದು ಭಾರತೀಯ ಮ್ಯೂಚುವಲ್‌ ಫಂಡ್‌ ಸಂಸ್ಥೆಗಳ ಒಕ್ಕೂಟ (ಎಎಂಎಫ್‌ಐ) ತಿಳಿಸಿದೆ.

‘ಷೇರುಪೇಟೆಯಲ್ಲಿ ಸೂಚ್ಯಂಕ ಏರಿಕೆ ಕಂಡಿರುವುದರಿಂದ ಡಿಸೆಂಬರ್ ತ್ರೈಮಾಸಿಕದಲ್ಲಿ ನಿರ್ವಹಣಾ ಸಂಪತ್ತು ಗರಿಷ್ಠ ಮಟ್ಟಕ್ಕೆ ತಲುಪಿದೆ. ನಿಫ್ಟಿ 50 ಅಕ್ಟೋಬರ್‌ನಲ್ಲಿ ಶೇ 3.15ರಷ್ಟು, ನವೆಂಬರ್‌ನಲ್ಲಿ ಶೇ 14.9ರಷ್ಟು ಹಾಗೂ ಡಿಸೆಂಬರ್‌ನಲ್ಲಿ ಶೇ 12.02ರಷ್ಟು ಏರಿಕೆ ಕಂಡಿದೆ’ ಎಂದು ಫೈರ್ಸ್‌ ಸಂಸ್ಥೆಯ ಸಂಶೋಧನಾ ಮುಖ್ಯಸ್ಥ ಗೋಪಾಲ್‌ ಕಾವಲಿರೆಡ್ಡಿ ತಿಳಿಸಿದ್ದಾರೆ.

ADVERTISEMENT

ಸಕ್ರಿಯವಾಗಿರುವ 42 ಸಂಸ್ಥೆಗಳ ಒಟ್ಟಾರೆ ನಿರ್ವಹಣಾ ಸಂಪತ್ತಿನಲ್ಲಿ ಎಸ್‌ಬಿಐ ಎಂಎಫ್‌, ಎಚ್‌ಡಿಎಫ್‌ಸಿ ಎಂಎಫ್‌, ಐಸಿಐಸಿಐ ಪ್ರ್ಯುಡೆನ್ಶಿಯಲ್‌ ಎಂಎಫ್‌, ಆದಿತ್ಯ ಬಿರ್ಲಾ ಸನ್‌ ಲೈಫ್‌ ಎಂಎಫ್‌ ಸಂಸ್ಥೆಗಳ ಪಾಲು ಶೇ 50ರಷ್ಟಿದೆ.

ನಿರ್ವಹಣಾ ಸಂಪತ್ತು (ಲಕ್ಷ ಕೋಟಿಗಳಲ್ಲಿ)

ಎಸ್‌ಬಿಐ ಎಂಎಫ್‌;₹ 4.56

ಎಚ್‌ಡಿಎಫ್‌ಸಿ ಎಂಫ್‌;₹ 3.89

ಐಸಿಐಸಿಐ ಪ್ರ್ಯುಡೆನ್ಶಿಯಲ್‌ ಎಂಎಫ್‌;₹ 3.8

ಆದಿತ್ಯ ಬಿರ್ಲಾ ಸನ್‌ಲೈಫ್‌ ಎಂಎಫ್‌;₹ 2.55

ಕೋಟಕ್‌ ಮಹೀಂದ್ರ ಎಂಎಫ್‌;₹ 2.16

ನಿಪ್ಪಾನ್‌ ಇಂಡಿಯಾ ಎಂಎಫ್‌;₹ 2.13

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.