ADVERTISEMENT

ಇನ್ಫೊಸಿಸ್‌ ತೆಕ್ಕೆಗೆ ಅಮೆರಿಕದ ಸಿಂಪ್ಲಸ್‌

ಪಿಟಿಐ
Published 11 ಫೆಬ್ರುವರಿ 2020, 16:23 IST
Last Updated 11 ಫೆಬ್ರುವರಿ 2020, 16:23 IST
ಇನ್ಫೊಸಿಸ್‌
ಇನ್ಫೊಸಿಸ್‌   

ನವದೆಹಲಿ: ಮಾಹಿತಿ ತಂತ್ರಜ್ಞಾನ ಕ್ಷೇತ್ರದ ದೈತ್ಯ ಸಂಸ್ಥೆ ಇನ್ಫೊಸಿಸ್‌, ಅಮೆರಿಕದ ಸಿಂಪ್ಲಸ್ ಕಂಪನಿಯನ್ನು ₹ 1,750 ಕೋಟಿಗೆ ಸ್ವಾಧೀನಪಡಿಸಿಕೊಂಡಿದೆ.

ಕ್ಲೌಡ್‌ ಕನ್ಸಲ್ಟಿಂಗ್‌, ದತ್ತಾಂಶ ಕ್ರೋಡೀಕರಣ, ತರಬೇತಿ ಸೇವೆ ಒದಗಿಸುವಲ್ಲಿ ಸಿಂಪ್ಲಸ್‌ ಮುಂಚೂಣಿಯಲ್ಲಿ ಇದೆ. ಗ್ರಾಹಕರ ಜತೆಗಿನ ಬಾಂಧವ್ಯ ನಿರ್ವಹಿಸುವ ಕ್ಲೌಡ್‌ ಆಧಾರಿತ ಡಿಜಿಟಲ್‌ ಉದ್ದಿಮೆ ಕ್ಷೇತ್ರದಲ್ಲಿನ ಇನ್ಫೊಸಿಸ್‌ನ ವಹಿವಾಟು ಜಾಗತಿಕವಾಗಿ ವೃದ್ಧಿಗೊಳ್ಳಲು ಈ ಸ್ವಾಧೀನ ನೆರವಾಗಲಿದೆ. ಜತೆಗೆ, ಈ ಕ್ಷೇತ್ರದಲ್ಲಿನ ಕಂಪನಿಯ ಜಾಗತಿಕ ಮನ್ನಣೆಯೂ ಹೆಚ್ಚಲಿದೆ. ಅತ್ಯಾಧುನಿಕ ತಂತ್ರಜ್ಞಾನ, ಹಣಕಾಸು ಸೇವೆ, ರಿಟೇಲ್‌, ಆರೋಗ್ಯ ರಕ್ಷಣೆ, ಜೀವ ವಿಜ್ಞಾನ ಮತ್ತು ತಯಾರಿಕೆ ಕ್ಷೇತ್ರದಲ್ಲಿ ಕಂಪನಿಯ ವಹಿವಾಟು ವಿಸ್ತರಿಸಲು ಸಾಧ್ಯವಾಗಲಿದೆ. ಕಂಪನಿಯ ಕ್ಲೌಡ್‌ ಆಧಾರಿತ ಡಿಜಿಟಲ್‌ ಬದಲಾವಣೆ ಸಾಮರ್ಥ್ಯವೂ ವೃದ್ಧಿಯಾಗಲಿದೆ ಎಂದು ಇನ್ಫೊಸಿಸ್‌ ತಿಳಿಸಿದೆ.

ಕಂಪನಿಯ ಕಚೇರಿಯಲ್ಲಿ ಕುಳಿತುಕೊಂಡು ಹೊಸ ಉತ್ಪನ್ನ ಮತ್ತು ಸೇವೆಗಳನ್ನು ಒದಗಿಸುವ ಬದಲಿಗೆ, ಕ್ಲೌಡ್‌ ಮೂಲಸೌಕರ್ಯ ಬಳಸಿ ಸೇವೆ ಒದಗಿಸುವುದರ ದಕ್ಷತೆ ಹೆಚ್ಚಳಗೊಳ್ಳಲಿದೆ. ಈ ಸ್ವಾಧೀನ ಪ್ರಕ್ರಿಯೆಯು ಮುಂದಿನ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.