ಬೆಂಗಳೂರು: ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರಗಳು ಒಂದು ತಿಂಗಳಿನಿಂದ ಇಳಿಮುಖವಾಗಿವೆ.
ಮಂಗಳವಾರ ಪ್ರತಿ ಲೀಟರ್ ಪೆಟ್ರೋಲ್ ದರ 18 ಪೈಸೆ ಹಾಗೂ ಡೀಸೆಲ್ ದರ 19 ಪೈಸೆ ಇಳಿಕೆಯಾಗಿದ್ದು, ಚಿಲ್ಲರೆ ಮಾರಾಟ ದರ ಕ್ರಮವಾಗಿ₹ 69.21 ಮತ್ತು ₹ 63.01ಕ್ಕೆ ತಲುಪಿದೆ. ಒಂದು ತಿಂಗಳಿನಲ್ಲಿ ಅಂದರೆ ಡಿಸೆಂಬರ್ 1ರಿಂದ ಜನವರಿ 1ರವರೆಗೆ ಪ್ರತಿ ಲೀಟರ್ ಪೆಟ್ರೋಲ್ ₹ 3.88 ಹಾಗೂ ಡೀಸೆಲ್ ₹ 4.69ರಷ್ಟು ಇಳಿಕೆ ಕಂಡಿವೆ.
ವಿಮಾನ ಇಂಧನ (ಎಟಿಎಫ್) ದರ ಶೇ 14.7ರಷ್ಟು ಕಡಿಮೆಯಾಗಿದೆ. ಇದರಿಂದ ಒಂದು ಕೆ.ಜಿ ಮಾರಾಟ ದರ ₹ 58,060.97ಕ್ಕೆ ಇಳಿಕೆಯಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.