ADVERTISEMENT

ಪೆಟ್ರೋಲ್‌ 50 ಪೈಸೆ, ಡೀಸೆಲ್‌ 55 ಪೈಸೆ ಹೆಚ್ಚಳ: ಇಂದಿನ ದರ ಎಷ್ಟು?

ಪಿಟಿಐ
Published 27 ಮಾರ್ಚ್ 2022, 11:31 IST
Last Updated 27 ಮಾರ್ಚ್ 2022, 11:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ದೇಶದಾದ್ಯಂತ ಭಾನುವಾರವೂ ಇಂಧನ ದರ ಹೆಚ್ಚಿಸಿವೆ. ಆರು ದಿನಗಳಲ್ಲಿ ಐದನೇ ಬಾರಿಗೆ ದರ ಹೆಚ್ಚಳ ಮಾಡಲಾಗಿದೆ. ಈ ಅವಧಿಯಲ್ಲಿ ಪೆಟ್ರೋಲ್‌ ದರ ಲೀಟರಿಗೆ ₹ 3.70ರಷ್ಟು ಮತ್ತು ಡೀಸೆಲ್‌ ದರ ₹ 3.70ರಷ್ಟು ಏರಿಕೆಯಾಗಿದೆ.

ದೆಹಲಿಯಲ್ಲಿ ಪೆಟ್ರೋಲ್‌ ದರ 50 ಪೈಸೆ ಮತ್ತು ಡೀಸೆಲ್‌ ದರ 55 ಪೈಸೆ ಹೆಚ್ಚಿಸಲಾಗಿದೆ. ಇದರಿಂದ ಮಾರಾಟ ದರವು ಲೀಟರಿಗೆ ₹ 99.11 ಮತ್ತು ₹ 90.42ಕ್ಕೆ ಏರಿಕೆ ಆಗಿದೆ.

ಬೆಂಗಳೂರಿನಲ್ಲಿ ಪ್ರತಿ ಲೀಟರ್‌ ಪೆಟ್ರೋಲ್‌ ದರ ₹ 104.44 ಮತ್ತು ಡೀಸೆಲ್ ದರ ₹ 88.66ಕ್ಕೆ ತಲುಪಿದೆ. ಸ್ಥಳೀಯ ತೆರಿಗೆಗೆ ಅನುಗುಣವಾಗಿ ರಾಜ್ಯದಿಂದ ರಾಜ್ಯಕ್ಕೆ ಮಾರಾಟ ದರದಲ್ಲಿ ವ್ಯತ್ಯಾಸ ಆಗುತ್ತದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.