ADVERTISEMENT

ಬೀದಿಬದಿ ವ್ಯಾಪಾರಿಗಳಿಗೆ ಸಾಲ: ‘ಸ್ವನಿಧಿ’ ಆ್ಯಪ್‌ಗೆ ಚಾಲನೆ

ಪಿಟಿಐ
Published 19 ಆಗಸ್ಟ್ 2020, 19:31 IST
Last Updated 19 ಆಗಸ್ಟ್ 2020, 19:31 IST

ನವದೆಹಲಿ: ‘ಪಿಎಂ ಸ್ವನಿಧಿ’ ಯೋಜನೆಯ ಅಡಿ ಬೀದಿಬದಿ ವ್ಯಾಪಾರಿಗಳು ಸಾಲ ಕೋರಿ ಸಲ್ಲಿಸುವ ಅರ್ಜಿಗಳನ್ನು ನಗರ ಸ್ಥಳೀಯ ಸಂಸ್ಥೆಗಳು ಸ್ವೀಕರಿಸಲು ಅನುವು ಮಾಡಿಕೊಡುವ ಆ್ಯಪ್‌ಗೆ ಕೇಂದ್ರ ಸಚಿವ ಹರದೀಪ್ ಸಿಂಗ್ ಪುರಿ ಬುಧವಾರ ಚಾಲನೆ ನೀಡಿದರು.

ರಾಜ್ಯಗಳ ನಗರಾಭಿವೃದ್ಧಿ ಸಚಿವರ ಜೊತೆ ನಡೆದ ಸಂವಾದದ ಸಂದರ್ಭದಲ್ಲಿ ಪುರಿ ಅವರು ಈ ಆ್ಯಪ್‌ಗೆ ಚಾಲನೆ ನೀಡಿದರು ಎಂದು ಪ್ರಕಟಣೆ ತಿಳಿಸಿದೆ. ‘ಪಿಎಂ ಸ್ವನಿಧಿ’ ಯೋಜನೆಯ ಫಲಾನುಭವಿಗಳಿಗೆ ಪಿಎಂ ಆವಾಸ್ ಯೋಜನೆ (ನಗರ), ಆಯುಷ್ಮಾನ್ ಭಾರತ, ಉಜ್ವಲ ಯೋಜನೆ, ಜನಧನ ಯೋಜನೆ ಸೇರಿದಂತೆ ಇತರ ಯೋಜನೆಗಳ ಅಡಿ ನೆರವು ವಿಸ್ತರಿಸುವ ಉದ್ದೇಶದಿಂದಅವರ ಸಮಾಜೋಆರ್ಥಿಕ ಮಾಹಿತಿ ಸಂಗ್ರಹಿಸುವ ತೀರ್ಮಾನವನ್ನೂ ಈ ಸಂದರ್ಭದಲ್ಲಿ ಕೈಗೊಳ್ಳಲಾಗಿದೆ.

‘ಪಿಎಂ ಸ್ವನಿಧಿ’ ಯೋಜನೆಯ ಅಡಿಯಲ್ಲಿ ಬೀದಿಬದಿ ವ್ಯಾಪಾರಿಗಳು ₹ 10 ಸಾವಿರದವರೆಗೆ ದುಡಿಯುವ ಬಂಡವಾಳದ ರೂಪದಲ್ಲಿ ಸಾಲ ಪಡೆಯಬಹುದು. ಇದನ್ನು ಒಂದು ವರ್ಷದ ಅವಧಿಯಲ್ಲಿ ಕಂತುಗಳ ರೂಪದಲ್ಲಿ ಮರುಪಾವತಿ ಮಾಡಬಹುದು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.