ನವದೆಹಲಿ: ವಿಮೆಗಳನ್ನು ಆನ್ಲೈನ್ ಮೂಲಕ ಮಾರಾಟ ಮಾಡುವ ಜನಪ್ರಿಯ ವೇದಿಕೆ ಪಾಲಿಸಿಬಜಾರ್ನ ಮಾತೃಸಂಸ್ಥೆ ಪಿಬಿ ಫಿನ್ಟೆಕ್ ತನ್ನ ಷೇರುಗಳನ್ನು ಐಪಿಒ ಮೂಲಕ ಸಾರ್ವಜನಿಕರಿಗೆ ಖರೀದಿಗೆ ಮುಕ್ತವಾಗಿಸಲಿದ್ದು, ನವೆಂಬರ್ 1ರಿಂದ 3ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ಇದೆ.
ಕಂಪನಿಯು ಪ್ರತಿ ಷೇರಿಗೆ ₹ 940–980 ಬೆಲೆ ನಿಗದಿ ಮಾಡಿದೆ. ಐಪಿಒ ಮೂಲಕ ಒಟ್ಟು ₹ 5,710 ಕೋಟಿ ಬಂಡವಾಳ ಸಂಗ್ರಹಿಸುವ ಗುರಿಯನ್ನು ಹೊಂದಿದೆ. ಸಣ್ಣ ಹೂಡಿಕೆದಾರರಿಗೆ ಒಟ್ಟು ಶೇಕಡ 10ರಷ್ಟು ಷೇರುಗಳನ್ನು ಮೀಸಲಿಡಲಾಗಿದೆ. ಸಂಗ್ರಹ ಆಗುವ ಬಂಡವಾಳವನ್ನು ಕಂಪನಿ ಚಟುವಟಿಕೆಗಳನ್ನು ದೇಶದ ಹೊರಗೆ ವಿಸ್ತರಿಸುವ ಉದ್ದೇಶಕ್ಕೂ ಬಳಸಿಕೊಳ್ಳಲಾಗುತ್ತದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.