ADVERTISEMENT

ದೇಶಿ ಮಾರುಕಟ್ಟೆಗೆ ಸೆನೆಟರ್ ಸಮೂಹ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2018, 17:24 IST
Last Updated 2 ಡಿಸೆಂಬರ್ 2018, 17:24 IST
ಶೆಟ್ಟಿ ವಂಶಿಧರ್‌
ಶೆಟ್ಟಿ ವಂಶಿಧರ್‌   

ಬೆಂಗಳೂರು: ವಾಣಿಜ್ಯ ಪೀಠೋಪಕರಣಗಳ ವಿಶ್ವದ ಅತಿದೊಡ್ಡ ಸಂಸ್ಥೆಯಾಗಿರುವ ಬ್ರಿಟನ್ನಿನ ಸೆನೆಟರ್ ಸಮೂಹವು ದೇಶಿ ಮಾರುಕಟ್ಟೆ ಪ್ರವೇಶಿಸಿದೆ.

ಉತ್ಕೃಷ್ಟ ಗುಣಮಟ್ಟದ ಪ್ರೀಮಿಯಂ ಬ್ರ್ಯಾಂಡ್‌ಗಳಾದ ಸೆನೆಟರ್ ಮತ್ತು ಅಲರ್‌ಮಿಯರ್‌ ಪೀಠೋಪಕರಣಗಳನ್ನು ಬೆಂಗಳೂರಿನ ಮಾರುಕಟ್ಟೆಗೆ ಪರಿಚಯಿಸಿದೆ. ನಗರದ ಇಂದಿರಾನಗರದಲ್ಲಿ ಷೋರೂಂ ಆರಂಭಿಸಲಾಗಿದೆ.

‘ಸೆನೆಟರ್ ಸಮೂಹವು ಜಾಗತಿಕವಾಗಿ ರಿಟೇಲ್, ಆತಿಥ್ಯ, ಕಾರ್ಪೊರೇಟ್, ಬ್ಯಾಂಕಿಂಗ್, ಹಣಕಾಸು ಹಾಗೂ ಆಟೊಮೊಬೈಲ್ ಕ್ಷೇತ್ರದ ಕಾರ್ಪೊರೇಟ್‌ ಬಳಕೆದಾರರನ್ನು ಹೊಂದಿದೆ. ಸಂಸ್ಥೆಯ ಬಹುರಾಷ್ಟ್ರೀಯ ಗ್ರಾಹಕರಿಗೆ ಉತ್ತಮ ಸೇವೆ ಒದಗಿಸಲು ಭಾರತದಲ್ಲಿ ವಹಿವಾಟು ವಿಸ್ತರಿಸಲಾಗುತ್ತಿದೆ’ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಶೆಟ್ಟಿ ವಂಶಿಧರ ರಾವ್‌ ಹೇಳಿದ್ದಾರೆ.

ADVERTISEMENT

‘ಉದ್ದಿಮೆ ಸಂಸ್ಥೆಗಳ ಪೀಠೋಪಕರಣ ಅಗತ್ಯಗಳನ್ನು ಸಂಸ್ಥೆಯು ಸಂಪೂರ್ಣವಾಗಿ ಈಡೇರಿಸಲಿದೆ. ಕಾರ್ಪೊರೇಟ್‌ ಜಗತ್ತಿನ ಎಲ್ಲ ಬಗೆಯ ಅಗತ್ಯಗಳನ್ನು ಈಡೇರಿಸುವ ವಿಶಿಷ್ಟ ಬ್ರ್ಯಾಂಡ್‌ ಇದಾಗಿದೆ.

‘ಸ್ಟಾರ್ಟ್‌ಅಪ್‌ಗಳ ಬೇಡಿಕೆಗಳನ್ನೂ ಒದಗಿಸಲಾಗುವುದು. ಭಾರತದಲ್ಲಿ ಕಚೇರಿ ಪೀಠೋಪಕರಣಗಳ ವಹಿವಾಟು 2021ರ ವೇಳೆಗೆ
₹ 98 ಸಾವಿರ ಕೋಟಿಗಳಷ್ಟು ಇರಲಿದೆ. ಬೆಂಗಳೂರಿನ ಮಾರುಕಟ್ಟೆಯಲ್ಲಿ ಇಂತಹ ಗುಣಮಟ್ಟದ ಉತ್ಪನ್ನಗಳಿಗೆ ಕಾರ್ಪೊರೇಟ್ ವಲಯದಿಂದ ಭಾರಿ ಬೇಡಿಕೆ ಇದೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.