ADVERTISEMENT

ಷೇರುಪೇಟೆಗಳ ವಹಿವಾಟು: ಮಾರಾಟದ ಒತ್ತಡ

ಪಿಟಿಐ
Published 3 ಜನವರಿ 2019, 19:20 IST
Last Updated 3 ಜನವರಿ 2019, 19:20 IST

ಮುಂಬೈ: ದೇಶಿ ಮತ್ತು ಜಾಗತಿಕ ವಿದ್ಯಮಾನಗಳ ಪ್ರಭಾವಕ್ಕೆ ಒಳಗಾಗಿ ಗುರುವಾರ ಷೇರುಪೇಟೆಗಳ ವಹಿವಾಟು ಇಳಿಕೆ ಕಂಡಿತು.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ (ಬಿಎಸ್‌ಇ) 378 ಅಂಶ ಇಳಿಕೆಯಾಗಿ 35,513 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 120 ಅಂಶ ಇಳಿಕೆ ಕಂಡು 10,672 ಅಂಶಗಳಲ್ಲಿ ವಹಿವಾಟು ಅಂತ್ಯಗೊಂಡಿದೆ.

ADVERTISEMENT

ಸ್ಮಾರ್ಟ್‌ಪೋನ್‌ ದಿಗ್ಗಜ ಸಂಸ್ಥೆ ಐಫೋನ್‌ 12 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ತನ್ನ ವರಮಾನ ಮುನ್ನೋಟವನ್ನು ತಗ್ಗಿಸಿದೆ. ಇದರಿಂದಾಗಿ ವಾಲ್‌ ಸ್ಟ್ರೀಟ್‌ನಲ್ಲಿ ಅತಿಯಾದ ಮಾರಾಟದ ಒತ್ತಡ ಕಂಡುಬಂದಿತು. ಇದರ ಪರಿಣಾಮಕ್ಕೆ ಒಳಗಾಗಿ ಏಷ್ಯಾ ಮತ್ತು ಯುರೋಪಿನ ಷೇರುಪೇಟೆಗಳಲ್ಲಿಯೂ ವಹಿವಾಟು ಇಳಿಕೆಯಾಯಿತು. ಇದು ಭಾರತದ ಷೇರುಪೇಟೆ ಮೇಲೂ ಪರಿಣಾಮ ಬೀರಿತು ಎಂದು ತಜ್ಞರು ವಿಶ್ಲೇಷಣೆ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.