ADVERTISEMENT

ನವೆಂಬರ್‌ 30ರಿಂದು ಸ್ಟಾರ್‌ ಹೆಲ್ತ್‌ ಐಪಿಒ

ಪಿಟಿಐ
Published 24 ನವೆಂಬರ್ 2021, 13:49 IST
Last Updated 24 ನವೆಂಬರ್ 2021, 13:49 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಸ್ಟಾರ್‌ ಹೆಲ್ತ್‌ ಆ್ಯಂಡ್‌ ಅಲೈಡ್ ಇನ್ಶುರೆನ್ಸ್‌ ಕಂಪನಿಯ ಆರಂಭಿಕ ಸಾರ್ವಜನಿಕ ಕೊಡುಗೆಯು (ಐಪಿಒ) ನವೆಂಬರ್‌ 30ರಂದು ಆರಂಭ ಆಗಲಿದ್ದು, ಪ್ರತಿ ಷೇರಿನ ಬೆಲೆಯನ್ನು ₹ 870–₹ 900ರಂತೆ ನಿಗದಿ ಮಾಡಿರುವುದಾಗಿ ಕಂಪನಿ ಬುಧವಾರ ಹೇಳಿದೆ.

ಐಪಿಒ ಮೂಲಕ ₹ 7,249 ಕೋಟಿ ಬಂಡವಾಳ ಸಂಗ್ರಹಿಸುವ ಗುರಿಯನ್ನು ಕಂಪನಿ ಹೊಂದಿದೆ. ನವೆಂಬರ್‌ 30ರಂದು ಐಪಿಒ ಆರಂಭ ಆಗಲಿದ್ದು ಡಿಸೆಂಬರ್‌ 2ರಂದು ಮುಕ್ತಾಯವಾಗಲಿದೆ. ಆರಂಭಿಕ ಹೂಡಿಕೆದಾರರಿಗೆ (ಆ್ಯಂಕರ್‌ ಇನ್‌ವೆಸ್ಟರ್ಸ್‌) ನವೆಂಬರ್ 29ರಂದು ಬಿಡ್‌ ಸಲ್ಲಿಸಲು ಅವಕಾಶ ಇರಲಿದೆ ಎಂದು ಕಂಪನಿಯು ತಿಳಿಸಿದೆ.

ಶೇಕಡ 75ರಷ್ಟು ಷೇರುಗಳನ್ನು ಅರ್ಹ ಸಾಂಸ್ಥಿಕ ಖರೀದಿದಾರರಿಗೆ (ಕ್ಯುಐಬಿ), ಶೇ 15ರಷ್ಟು ಷೇರುಗಳನ್ನು ಸಾಂಸ್ಥಿಕೇತರ ಹೂಡಿಕೆದಾರರಿಗೆ ಹಾಗೂ ಉಳಿದ ಶೇ 10ರಷ್ಟು ಷೇರುಗಳನ್ನು ಸಣ್ಣ ಹೂಡಿಕೆದಾರರಿಗೆ ಕಾಯ್ದಿರಿಸಲಾಗಿದೆ ಎಂದು ಕಂಪನಿ ಮಾಹಿತಿ ನೀಡಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.