ADVERTISEMENT

ದ್ವಿಚಕ್ರ ವಾಹನ | ಈ ವರ್ಷ ಭಾರತದ ಮಾರುಕಟ್ಟೆಗೆ 11 ಹೊಸ ಮಾದರಿ: ಡುಕಾಟಿ

ಪಿಟಿಐ
Published 3 ಜನವರಿ 2022, 13:11 IST
Last Updated 3 ಜನವರಿ 2022, 13:11 IST
ಡುಕಾಟಿ ಮಲ್ಟಿಸ್ಟ್ರಾಡ್‌ ವಿ4 (ಪ್ರಾತಿನಿಧಿಕ ಚಿತ್ರ)
ಡುಕಾಟಿ ಮಲ್ಟಿಸ್ಟ್ರಾಡ್‌ ವಿ4 (ಪ್ರಾತಿನಿಧಿಕ ಚಿತ್ರ)   

ನವದೆಹಲಿ: ಸೂಪರ್‌ ಬೈಕ್‌ಗಳನ್ನು ತಯಾರಿಸುವ ಇಟಲಿಯ ಡುಕಾಟಿ ಕಂಪನಿಯು ಈ ವರ್ಷ ಭಾರತದ ಮಾರುಕಟ್ಟೆಗೆ ಒಟ್ಟು 11 ಹೊಸ ದ್ವಿಚಕ್ರ ವಾಹನಗಳನ್ನು ಬಿಡುಗಡೆ ಮಾಡುವುದಾಗಿ ಸೋಮವಾರ ತಿಳಿಸಿದೆ.

ಸ್ಕ್ರ್ಯಾಂಬ್ಲರ್‌ 800, ಅರ್ಬನ್‌ ಮೋಟಾರ್ಡ್‌, ಸ್ಟ್ರೀಟ್‌ಫೈಟರ್‌ ವಿ2, ಮಲ್ಟಿಸ್ಟ್ರಾಡ್‌ ವಿ2, ಮಲ್ಟಿಸ್ಟ್ರಾಡ್‌ ವಿ4 ಪೈಕ್ಸ್‌ ಪೀಕ್, ಸ್ಟ್ರೀಟ್‌ಫೈಟರ್‌ ವಿ4 ಎಸ್‌ಪಿ, ಎಂವೈ22 ಪನಿಗೇಲ್‌ ವಿ4 ಮತ್ತು ಎಕ್ಸ್‌ನ ಹೊಸ ಮಾದರಿಗಳು ಬರಲಿವೆ ಎಂದು ಅದು ಹೇಳಿದೆ.

‘2021ರಲ್ಲಿ ಒಟ್ಟು 15 ಹೊಸ ಮಾದರಿಗಳನ್ನು ಬಿಡುಗಡೆ ಮಾಡುವುದಾಗಿ ಘೋಷಿಸಲಾಗಿತ್ತು. ವಾಹನೋದ್ಯಮಕ್ಕೆ ಎದುರಾದ ಹಲವು ಸಂಕಷ್ಟಗಳ ನಡುವೆಯೂ ಆ ಭರವಸೆ ಈಡೇರಿಸುವಲ್ಲಿ ಯಶಸ್ವಿಯಾಗಿದ್ದೇವೆ’ ಎಂದು ಕಂಪನಿಯ ಭಾರತದ ವ್ಯವಸ್ಥಾಪ‍ಕ ನಿರ್ದೇಶಕ ವಿಪುಲ್‌ ಚಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ADVERTISEMENT

ಕಂಪನಿಯ ಇತಿಹಾಸದಲ್ಲಿ ಜಾಗತಿಕ ಮಟ್ಟದಲ್ಲಿ 2021ರ ಮೂರನೇ ತ್ರೈಮಾಸಿಕವು ಉತ್ತಮವಾಗಿದೆ. 2020ರ ಮೂರನೇ ತ್ರೈಮಾಸಿಕಕ್ಕೆ ಹೋಲಿಸಿದರೆ ಶೇ 3ರಷ್ಟು ಹಾಗೂ 2019ರ ಇದೇ ಅವಧಿಗೆ ಹೋಲಿಸಿದರೆ ಶೇ 25ರಷ್ಟು ಬೆಳವಣಿಗೆ ಆಗಿದೆ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.