ADVERTISEMENT

ವಿಷನ್‌ನೆಟ್‌: ಉದ್ಯೋಗಶೀಲತೆಗೆ ‘ಉನ್ನತಿ’

ಐದು ವರ್ಷಗಳಲ್ಲಿ 1 ಲಕ್ಷ ಪದವೀಧರರಿಗೆ ತರಬೇತಿ

​ಕೇಶವ ಜಿ.ಝಿಂಗಾಡೆ
Published 20 ಜೂನ್ 2020, 7:01 IST
Last Updated 20 ಜೂನ್ 2020, 7:01 IST
ಅಲೋಕ್‌ ಬನ್ಸಲ್‌
ಅಲೋಕ್‌ ಬನ್ಸಲ್‌   

ಬೆಂಗಳೂರು: ಬ್ಯಾಂಕಿಂಗ್ ಮತ್ತು ಹಣಕಾಸು ಕಂಪನಿಗಳಿಗೆ ತಂತ್ರಜ್ಞಾನ ಸೇವೆ ಒದಗಿಸುವ ವಿಷನ್‌ನೆಟ್‌ ಇಂಡಿಯಾ, ಐದು ವರ್ಷಗಳಲ್ಲಿ ದೇಶದಾದ್ಯಂತ 1 ಲಕ್ಷ ಪದವೀಧರರನ್ನು ಉದ್ಯೋಗಶೀಲರನ್ನಾಗಿಸಲು ‘ಉನ್ನತಿ’ ಹೆಸರಿನ ತರಬೇತಿ ಕಾರ್ಯಕ್ರಮ ಹಮ್ಮಿಕೊಂಡಿದೆ.

ಭಾರತದಲ್ಲಿ 12 ವರ್ಷಗಳ ಹಿಂದೆ ಕಾರ್ಯಾರಂಭ ಮಾಡಿರುವ ಅಮೆರಿಕದ ಈ ಬಹುರಾಷ್ಟ್ರೀಯ ಕಂಪನಿಯು, ಪದವೀಧರರ ಉದ್ಯೋಗ ಕೌಶಲ ಹೆಚ್ಚಿಸಲು ‘ಭಾರತಕ್ಕಾಗಿ ಉನ್ನತಿ’ ಹೆಸರಿನ 45 ದಿನಗಳ ಉಚಿತ ತರಬೇತಿ ಕಾರ್ಯಕ್ರಮವನ್ನು ತನ್ನ ಕಾರ್ಪೊರೇಟ್‌ಗಳ ಸಾಮಾಜಿಕ ಹೊಣೆಗಾರಿಕೆಯಡಿ (ಸಿಎಸ್‌ಆರ್‌) ಕೈಗೆತ್ತಿಕೊಂಡಿದೆ.

‘ಐ.ಟಿ ಪದವೀಧರರ ವೃತ್ತಿ ಕೌಶಲ ಹೆಚ್ಚಿಸಿ ಐ.ಟಿ, ಐ.ಟಿ ಆಧಾರಿತ ಸೇವೆಗಳು ಮತ್ತು ಇತರ ಪೂರಕ ಸೇವಾ ಕ್ಷೇತ್ರಗಳಲ್ಲಿ ಉದ್ಯೋಗ ಪಡೆಯುವಂತೆ ಮಾಡುವುದು ‘ಉನ್ನತಿ’ಯ ಧ್ಯೇಯವಾಗಿದೆ’ ಎಂದು ವಿಷನ್‌ನೆಟ್‌ನ ವ್ಯವಸ್ಥಾಪಕ ನಿರ್ದೇಶಕ ಅಲೋಕ್‌ ಬನ್ಸಲ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ADVERTISEMENT

‘ಬೆಂಗಳೂರು ಮತ್ತು ಕೊಯಿಮತ್ತೂರಿನಲ್ಲಿ ಪ್ರಾಯೋಗಿಕವಾಗಿ ತರಬೇತಿಗೆ ಚಾಲನೆ ನೀಡಲಾಗಿದೆ. ಐದು ವರ್ಷಗಳಲ್ಲಿ 1 ಲಕ್ಷ ಯುವ ಜನರಿಗೆ ತರಬೇತಿ ನೀಡಲು ಮತ್ತು ಸಣ್ಣ ಪಟ್ಟಣಗಳಲ್ಲಿನ ಪದವೀಧರರಿಗೂ ‘ಉನ್ನತಿ’ಯ ಪ್ರಯೋಜನ ಕಲ್ಪಿಸಲು ಉದ್ದೇಶಿಸಲಾಗಿದೆ. ಸರ್ಕಾರ, ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದಲ್ಲಿ ಇದನ್ನು ಕಾರ್ಯಗತಗೊಳಿಸಲಾಗುವುದು. ತರಬೇತಿಗೆ ಹಾಜರಾದವರು ದತ್ತಾಂಶ ವಿಶ್ಲೇಷಣೆ – ನಿರ್ವಹಣೆ, ಬ್ಯಾಂಕಿಂಗ್‌ ಮತ್ತು ಹಣಕಾಸು ಸೇವೆಗಳ ವಹಿವಾಟು, ಮಾಹಿತಿ ಸಂರಕ್ಷಣೆ ಮತ್ತಿತರ ಕ್ಷೇತ್ರಗಳಲ್ಲಿ ಕೆಲಸ ಮಾಡಲು ಅರ್ಹತೆ ಹೊಂದಲಿದ್ದಾರೆ. ತರಬೇತಿ ಪೂರ್ಣಗೊಳಿಸಿದವರಿಗೆ ಪ್ರಮಾಣಪತ್ರ ನೀಡಲಾಗುವುದು. ಅರ್ಹರಿಗೆ ವಿಷನ್‌ನೆಟ್‌ನಲ್ಲಿಯೂ ಉದ್ಯೋಗ ಸಿಗಲಿದೆ.

‘ತಂತ್ರಜ್ಞಾನ ಕ್ಷೇತ್ರದಲ್ಲಿನ ಇತ್ತೀಚಿನ ಬದಲಾವಣೆಗೆ ಅನುಗುಣವಾಗಿ ಪದವೀಧರರ ವೃತ್ತಿ ಕೌಶಲ ಹೆಚ್ಚಿಸಿ ಅವರನ್ನು ಉದ್ಯೋಗಕ್ಕೆ ಸಿದ್ಧಗೊಳಿಸಲಾಗುವುದು. ಈ ಉನ್ನತಿ ತರಬೇತಿ ಕಾರ್ಯಕ್ರಮವು ಉಚಿತವಾಗಿರಲಿದೆ. ಆನ್‌ಲೈನ್‌ ಮತ್ತು ಆಫ್‌ಲೈನ್‌ ತರಬೇತಿ ಇದಾಗಿರಲಿದೆ.

‘ದೀರ್ಘಾವಧಿಯಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ವಹಿವಾಟು ವಿಸ್ತರಣೆಗೆ ವಿಪುಲ ಅವಕಾಶಗಳಿವೆ. ಮನೆಯಿಂದ ಕೆಲಸ ನಿರ್ವಹಿಸುವವರಿಂದ ಆಟೊಮೇಷನ್‌ ತಂತ್ರಜ್ಞಾನದ ಬಳಕೆ ಹೆಚ್ಚಿದೆ. ಕ್ಲೌಡ್‌ ತಂತ್ರಜ್ಞಾನದ ಮಹತ್ವವು ಎಲ್ಲರಿಗೂ ಅರಿವಾಗಿದೆ.

‘ಕೋವಿಡ್‌ ಪಿಡುಗಿನ ನಂತರದ ದಿನಗಳಲ್ಲಿ ಜಗತ್ತು ಹೊಸ ಚಿಂತನೆಗೆ ತೆರೆದುಕೊಳ್ಳಲಿದೆ. ಇದರಿಂದ ಡಿಜಿಟಲ್‌, ಕ್ಲೌಡ್‌ ಎಂಜಿನಿಯರಿಂಗ್, ಮಷಿನ್‌ ಲರ್ನಿಂಗ್‌, ರೋಬೊಟಿಕ್‌ ಪ್ರೊಸೆಸ್‌ ಅಟೊಮೇಷನ್‌ ಕ್ಷೇತ್ರಗಳ ವಹಿವಾಟು ವಿಸ್ತರಣೆಗೆ ಮತ್ತು ಹೊಸ ಉದ್ಯೋಗಗಳಿಗೆ ವಿಪುಲ ಅವಕಾಶಗಳು ಇವೆ. ತಂತ್ರಜ್ಞಾನ ಕ್ಷೇತ್ರಕ್ಕೆಎಂಜಿನಿಯರ್‌ಗಳನ್ನು ಮತ್ತು ಬಿಪಿಒ ವಹಿವಾಟಿಗೆ ವಿಜ್ಞಾನಯೇತರ ವಿಷಯಗಳ ಪದವೀಧರರನ್ನು ನೇಮಕ ಮಾಡಿಕೊಳ್ಳಲಿದೆ. ತರಬೇತಿ ಮಾಹಿತಿಗೆ https://bfsi.visionet.com/ corporate-social- responsibility/ ಸಂಪರ್ಕಿಸಬಹುದು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.