ADVERTISEMENT

ವಾಘ್‌ ಬಕ್ರಿ ಟೀ ಗ್ರೂಪ್‌ಗೆ ಶತಮಾನೋತ್ಸವ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2019, 20:36 IST
Last Updated 19 ಫೆಬ್ರುವರಿ 2019, 20:36 IST
   

ಬೆಂಗಳೂರು: ದೇಶಿ ಚಹ ಉದ್ದಿಮೆಯ ಬಹುದೊಡ್ಡ ಹೆಸರಾಗಿರುವ ವಾಘ್ ಬಕ್ರಿ ಚಹ ಸಮೂಹವು ವಹಿವಾಟಿನ 100ನೆ ವರ್ಷದ ಸಂಭ್ರಮಾಚರಣೆಯಲ್ಲಿದೆ.

ವಾರ್ಷಿಕ ₹ 1,100 ಕೋಟಿ ವಹಿವಾಟಿನ ಸಮೂಹವು ದೇಶದ 3ನೆ ಅತಿದೊಡ್ಡ ಪ್ಯಾಕೇಜ್ಡ್‌ ಚಹ ಪೂರೈಸುವ ಕಂಪನಿಯಾಗಿದೆ. ದೇಶ – ವಿದೇಶಗಳ ಚಹದ ಮಾರುಕಟ್ಟೆಯಲ್ಲಿ ಪ್ರಭಾವಿ ಸ್ಥಾನ ಹೊಂದಿದೆ.

‘ಟೀ ಲಾಂಜ್‌’ ಪರಿಕಲ್ಪನೆಯನ್ನು ದೇಶದಲ್ಲಿ ಮೊದಲ ಬಾರಿಗೆ ಪರಿಚಯಿಸಿರುವ ಹೆಗ್ಗಳಿಕೆಯೂ ಇದಕ್ಕೆ ಸೇರುತ್ತದೆ. ಶತಮಾನೋತ್ಸವ ಸಂಭ್ರಮದ ಅಂಗವಾಗಿ ಉದ್ದಿಮೆ ಸಮೂಹವು ಈಗ ಅಹ್ಮದಾಬಾದ್‌ನಲ್ಲಿ ತನ್ನ 2ನೆ ‘ಟೀ ಲಾಂಜ್‌’ ಆರಂಭಿಸಿದೆ. ಇದು ದೇಶದ 13ನೆ ಮಳಿಗೆಯಾಗಿದೆ. ಮುಂಬೈ, ದೆಹಲಿ, ಪುಣೆ ಮತ್ತು ಗೋವಾಗಳಲ್ಲಿ ಇಂತಹ ವಿಶಿಷ್ಟ ಮಳಿಗೆಗಳಿವೆ.

ADVERTISEMENT

ವಾಘ್‌ ಬಕ್ರಿ ಚಹದ ಬ್ರ್ಯಾಂಡ್ ಈಗ ಜಾಗತಿಕ ಮನ್ನಣೆಗೂ ಪಾತ್ರವಾಗಿದೆ. 40ಕ್ಕೂ ಹೆಚ್ಚು ದೇಶಗಳಿಗೆ ರಫ್ತು ಮಾಡಲಾಗುತ್ತಿದೆ.

ಚಹ ಪ್ರೇಮಿಗಳಿಗೆ ಗರಿಷ್ಠ ಗುಣಮಟ್ಟದ ಉತ್ಪನ್ನ ಒದಗಿಸಲು ಸಂಸ್ಥೆಯು ಈ ಸಂಭ್ರಮಾಚರಣೆ ಸಂದರ್ಭದಲ್ಲಿ ತನ್ನ ಬದ್ಧತೆಯನ್ನು
ಪುನರುಚ್ಚರಿಸುತ್ತದೆ ಎಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.