ADVERTISEMENT

ಎಂಥಾ ಕಾಲ ಬಂತು ನೋಡಿ !

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2011, 19:30 IST
Last Updated 25 ನವೆಂಬರ್ 2011, 19:30 IST
ಎಂಥಾ ಕಾಲ ಬಂತು ನೋಡಿ !
ಎಂಥಾ ಕಾಲ ಬಂತು ನೋಡಿ !   

ಬಾಗಲಕೋಟೆ: ಹಾವು, ಕಪ್ಪೆಯನ್ನು ನುಂಗುವುದು ಸಹಜ ಆದರೆ ಕಪ್ಪೆಯೇ ಹಾವನ್ನು ನುಂಗಿದರೆ...
ಹೌದು, ಇಂತಹ ಅಪರೂಪದ ಘಟನೆ ವಿದ್ಯಾಗಿರಿಯ ಅಯೋಧ್ಯೆ ಹೋಟೆಲ್ ಸಮೀಪದ ಚರಂಡಿಯಲ್ಲಿ ಶುಕ್ರವಾರ ನಡೆಯಿತು.

ಕಪ್ಪೆಯೊಂದು ದೊಡ್ಡ ಗಾತ್ರದ ಹಾವೊಂದನ್ನು ನುಂಗುವ ಈ ಅಪರೂಪದ ದೃಶ್ಯವನ್ನು ಸುತ್ತಲಿನ ಜನತೆ ಕುತೂಹಲದಿಂದ ವೀಕ್ಷಿಸಿದರು.  

 ಸುಮಾರು ಎರಡೂವರೆ ಅಡಿ ಉದ್ದನೆಯ ಹಾವೊಂದು ಚಿಕ್ಕ ಕಪ್ಪೆಯೊಂದನ್ನು ತಿನ್ನಲು ಮುನ್ನುಗ್ಗಿತು. ಇದಕ್ಕೆ ಬಗ್ಗದ ಕಪ್ಪೆ ಹಾವಿನೊಂದಿಗೆ ತೀವ್ರವಾಗಿ ಸೆಣಸಿತು. ಹೊಯ್ದಾಟದಲ್ಲಿ ಸೋತ ಹಾವನ್ನು ಕಪ್ಪೆಯೇ  ಅಚ್ಚುಕಟ್ಟಾಗಿ ನುಂಗಿ ಹಾಕಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.