ADVERTISEMENT

ಜಿನ್ನಿಂಗ್ ಫ್ಯಾಕ್ಟರಿಗೆ ಬೆಂಕಿ: 5.5 ಕೋಟಿ ರೂ. ಹಾನಿ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2011, 17:05 IST
Last Updated 22 ಫೆಬ್ರುವರಿ 2011, 17:05 IST

ರಾಣೆಬೆನ್ನೂರು:  ತಾಲ್ಲೂಕಿನ ಕಮದೋಡ ಗ್ರಾಮದಲ್ಲಿ ಸೋಹಂ ಕಾಟ್‌ಫಿನ್ ಜಿನ್ನಿಂಗ್ ಫ್ಯಾಕ್ಟರಿಯಲ್ಲಿ ಹತ್ತಿ ಅಂಡಿಗೆಗಳಿಗೆ ಮಂಗಳವಾರ ಸಂಜೆ ಆಕಸ್ಮಿಕ ಬೆಂಕಿ ತಗುಲಿ 4500ಕ್ಕೂ ಹೆಚ್ಚು ಅಂಡಿಗೆಗಳು ಹಾಗೂ ಶೆಡ್, ರಾಟಿಗಳು ಸಂಪೂರ್ಣ ಸುಟ್ಟಿವೆ.

ಹತ್ತಿ ಅಂಡಿಗೆ, ಯಂತ್ರೋಪಕರಣ ಸುಟ್ಟಿದ್ದರಿಂದ ಸುಮಾರು  ರೂ.5.5 ಕೋಟಿಗೂ ಅಧಿಕ ಹಾನಿ ಸಂಭವಿಸಿದೆ ಎಂದು ಅಂದಾಜು ಮಾಡಲಾಗಿದೆ.

ನಗರದ ಭಾಗ್ಯಲಕ್ಷ್ಮಿ ಟ್ರೇಡಿಂಗ್ ಕಂಪನಿ ಮಾಲೀಕರಾದ ಎಲ್.ಬಿ. ಪಾಟೀಲ ಅವರಿಗೆ ಸೇರಿದ ಹತ್ತಿ ಅಂಡಿಗೆಗಳು ಸುಟ್ಟುಹೋಗಿವೆ.

ರಾಣೆಬೆನ್ನೂರು, ಹರಿಹರ, ದಾವಣಗೆರೆ, ಕುಮಾರಪಟ್ಟಣ, ಹಿರೆಕೆರೂರು, ಹಾವೇರಿಯಿಂದ ಅಗ್ನಿಶಾಮಕ ದಳದ ವಾಹನಗಳು ಆಗಮಿಸಿದ್ದು, ಬೆಂಕಿ ನಂದಿಸಲು ಸಿಬ್ಬಂದಿ ಶ್ರಮಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.