ADVERTISEMENT

ಟಿಎಪಿಸಿಎಂಎಸ್‌ನಿಂದ ಪೆಟ್ರೋಲ್ ಬಂಕ್

​ಪ್ರಜಾವಾಣಿ ವಾರ್ತೆ
Published 1 ಮೇ 2012, 11:00 IST
Last Updated 1 ಮೇ 2012, 11:00 IST

ಶ್ರೀರಂಗಪಟ್ಟಣ: ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ (ಟಿಎಪಿಸಿಎಂಎಸ್)ದಿಂದ ಪೆಟ್ರೋಲ್ ಬಂಕ್ ಆರಂಭಿಸಲು ಸಿದ್ಧತೆ ನಡೆದಿದೆ ಎಂದು ಸಂಘದ ಅಧ್ಯಕ್ಷ ಬಿ.ಎಸ್. ಚಂದ್ರಶೇಖರ್ ತಿಳಿಸಿದರು.

ಮಂಗಳವಾರ ಗಂಜಾಂ ರಸ್ತೆಯಲ್ಲಿ ಟಿಎಪಿಸಿಎಂಎಸ್ ವತಿಯಿಂದ ನಿರ್ಮಿ ಸಿರುವ ರೂ.25 ಲಕ್ಷ ವೆಚ್ಚದ ವಾಣಿಜ್ಯ ಸಂಕೀರ್ಣ ಉದ್ಘಾಟಿಸಿ ಮಾತನಾಡಿದರು.

ಇಂಡಿಯನ್ ಆಯಿಲ್ ಕಾರ್ಪೊ ರೇಷನ್ (ಐಓಸಿ) ಸಹಯೋಗದಲ್ಲಿ ಪೆಟ್ರೋಲ್ ಬಂಕ್ ಆರಂಭವಾಗುತ್ತಿದ್ದು, ಮೇ 21ರ ಒಳಗೆ ಕಾರ್ಯಾರಂಭ ಮಾಡಲಿದೆ. ಟಿಎಪಿಸಿಎಂಎಸ್‌ನಿಂದ ಮತ್ತೊಂದು ವಾಣಿಜ್ಯ ಮಳಿಗೆ ನಿರ್ಮಿ ಸಲು ಉದ್ದೇಶಿಸಲಾಗಿದೆ. ಸಮಿತಿಯ ಕಲ್ಯಾಣ ಮಂಟಪ ಪುನರುಜ್ಜೀವನಗೊಳಿಸಲು ನಿರ್ಧಸಿದ್ದು, ಶೀಘ್ರ ಕಾಮಗಾರಿ ಶುರುವಾಗಲಿದೆ ಎಂದು ಹೇಳಿದರು.

ADVERTISEMENT

ಶಾಸಕ ರಮೇಶ ಬಂಡಿಸಿದ್ದೇಗೌಡ ಮಾತನಾಡಿ, ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ ಸದ್ಯ ಲಾಭದಲ್ಲಿ ನಡೆಯುತ್ತಿದೆ. ಆಡಳಿತ ಮಂಡಳಿ ಸಂಘವನ್ನು ಮತ್ತಷ್ಟು ಲಾಭದತ್ತ ಕೊಂಡೊಯ್ಯಬೇಕು ಎಂದು ಸಲಹೆ ನೀಡಿದರು.

ಸಹಕಾರ ಸಂಘಗಳ ಮೈಸೂರು ವಿಭಾಗೀಯ ಜಂಟಿ ನಿಬಂಧಕ ಬಿ.ಎಸ್.ಹರೀಶ್, ಉಪ ನಿಬಂಧಕ ಪಿ.ರಾಮಕೃಷ್ಣೇಗೌಡ, ಸಹಾಯಕ ನಿಬಂಧಕ ಪಿ.ಶಶಿಧರ್, ಜಿಲ್ಲಾ ಪಂಚಾಯತ್ ಎಇಇ ಹನುಮಂತಯ್ಯ, ಪುರಸಭೆ ಅಧ್ಯಕ್ಷ ಶಿವಾಜಿರಾವ್, ಜೂನಿಯರ್ ಎಂಜಿನಿಯರ್ ಚಂದ್ರಹಾಸ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.